ವ್ಯಾಲೆಂಟೈನ್‌ ಡೇಗೂ ಪತ್ನಿಗೆ ಭರ್ಜರಿ ಗಿಫ್ಟ್‌ ನೀಡಿದ ರೋಹಿತ್‌ ಶರ್ಮಾ ! ಏನದು ಗೊತ್ತಾ?


Wednesday, February 14th, 2018 12:35 pm

ಪೋರ್ಟ್‌ ಎಲಿಜಬೆತ್‌: ದಕ್ಷಿಣ ಆಫ್ರಿಕಾದ ನೆಲದಲ್ಲಿ ಸತತ ವೈಫಲ್ಯಗಳಿಂದ ಕ್ರಿಕೆಟ್‌ ಅಭಿಮಾನಿಗಳ ಟೀಕೆಗೆ ಗುರಿಯಾಗಿದ್ದ ಹಿಟ್‌ಮ್ಯಾನ್‌ ರೋಹಿತ್‌ ಕೊನೆಗೂ 5ನೇ ಪಂದ್ಯದಲ್ಲಿ ಶತಕಗಳಿಸುವ ಮೂಲಕ ವ್ಯಾಲೆಂಟೈನ್‌ ಡೇಗೆ ಭರ್ಜರಿ ಗಿಫ್ಟ್‌ ನೀಡಿದ್ದಾರೆ.

ಹೌದು, ಈ ಹಿಂದೆ ಶ್ರೀಲಂಕಾ ವಿರುದ್ಧ ನಡೆದ ಮೊದಲನೇ ಪಂದ್ಯದಲ್ಲಿ ಹೀನಾಯವಾಗಿ ಸೋಲನುಭವಿಸಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ ಮುಂದಿನ ಪಂದ್ಯದಲ್ಲಿ ರೋಹಿತ್‌ ಭರ್ಜರಿ ದ್ವಿಶತಕ ಸಿಡಿಸಿದ್ದರು. ಆ ದಿನ ರೋಹಿತ್‌ ತಮ್ಮ ಮ್ಯಾರೇಜ್‌ ಆನಿವರ್ಸರಿಯಾಗಿದ್ದು, ಈ ಮೂಲಕ ಪತ್ನಿಗೆ ಉಡುಗೊರೆಯಾಗಿ ಈ ದ್ವಿಶತಕವನ್ನು ಅರ್ಪಿಸಿದ್ದರು.

ಇದಲ್ಲದೇ ಮತ್ತೆ ಶ್ರೀಲಂಕಾ ವಿರುದ್ಧ ಎರಡನೇ ಟಿ 20 ಪಂದ್ಯದಲ್ಲಿ 35 ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದರು. ಆಂದು ರೋಹಿತ್‌ ಶರ್ಮಾರ ಪತ್ನಿ ರಿತಿಕಾರ ಹುಟ್ಟುಹಬ್ಬವಿತ್ತೆಂಬುದು ವಿಶೇಷವಾಗಿತ್ತು ಅಂದು ಕೂಡ ತಮ್ಮ ವಿಶೇಷ ಶತಕವನ್ನು ತಮ್ಮ ಪತ್ನಿಗೆ ಅರ್ಪಿಸಿದ್ದರು. ಇಂದು ಪ್ರೇಮಿಗಳ ದಿನವಾಗಿದ್ದು ನಿನ್ನೆಯೂ ಕೂಡ ಶತಕಗಳಿಸಿದ್ದಾರೆ. ಸರಣಿಯಲ್ಲಿ ವೈಫಲ್ಯವನ್ನು ಮೀರಿ ಭರ್ಜರಿ ಶತಕ ಸಿಡಿಸಿ ಸರಣಿ ಗೆಲ್ಲುವುದಕ್ಕೆ ನೆರವಾಗಿದ್ದು ಈ ಮೂಲಕ ತಮ್ಮ ಪತ್ನಿಗೆ ವ್ಯಾಲೆಂಟೈನ್‌ ಡೇಗೆ ಭರ್ಜರಿ ಗಿಫ್ಟ್‌ ನೀಡಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Health
Sandalwood
Food
Beauty Tips
Astrology
Cricket Score
Poll Questions