ನಾನ್ ವೆಜ್ ಬಿಟ್ಟರೆ ಈ ಲಾಭ ನಿಮ್ಮದಾಗುತ್ತದೆ..!


Wednesday, February 14th, 2018 8:18 am

ಸ್ಪೆಷಲ್ ಡೆಸ್ಕ್: ಈಗ ಕೆಲವರು ಮಾಂಸಾಹಾರವನ್ನ  ಬಿಟ್ಟು ಸಸ್ಯಾಹಾರವನ್ನ ಬಯಸುತ್ತಿದ್ದಾರೆ. ಇದು ಆರೋಗ್ಯದ ದೃಷ್ಟಿಯಿಂದ ಉತ್ತಮ ಕೂಡಾ ಹೌದು. ಶುದ್ಧ ಸಸ್ಯಾಹಾರವನ್ನು ಸೇವಿಸುವುದರಿಂದ ಆಗುವ ಪ್ರಯೋಜನಗಳು ಬಹಳಷ್ಟು. ಯಥೇಚ್ಛವಾಗಿರುವುದರಿಂದ ಇದು ಕರುಳಿನ ಕಾರ್ಯನಿರ್ವಹಣೆಗೆ ಅವಶ್ಯಕವಾಗಿದೆ.

ನಿಮ್ಮ ಆಹಾರದಲ್ಲಿ ಸಾಕಷ್ಟು ತರಕಾರಿಗಳನ್ನು ಬಳಸಿದರೆ‌ ಅತಿ ಹೆಚ್ಚು ಪೌಷ್ಟಿಕಾಂಶವು ದೊರೆಯುತ್ತದೆ. ಆರೋಗ್ಯಕರ ಚಯಾಪಚಯಕ್ಕೆ ಅಗತ್ಯವಿರುವ ಅಮೈನೊ ಆಸಿಡ್ ದೊರೆಯುತ್ತದೆ. ಹಾಗೆಯೇ ಸಸ್ಯಾಹಾರಿ ಆಹಾರಗಳಲ್ಲಿ ಕೊಬ್ಬು ಹಾಗೂ ಸೋಡಿಯಂ ಅಂಶ ಕಡಿಮೆ ಪ್ರಮಾಣದಲ್ಲಿರುತ್ತದೆ. ಹೀಗಾಗಿ ಇದು ರಕ್ತದೊತ್ತಡದ ಮಟ್ಟವನ್ನು ನಿಯಂತ್ರಿಸುವುದರಲ್ಲಿ ಸಹಾಯ ಮಾಡುತ್ತದೆ.

ಇನ್ನು ಮಾಂಸಾಹಾರಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಪ್ರಾಣಿಗಳ ಕೊಬ್ಬುಗಳು ಇರುವುದರಿಂದ ಇದು ಹೃದಯದ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. ಶಾಕಾಹಾರಿ ಆಹಾರದಲ್ಲಿ ಕಂಡುಬರುವ ಹಲವಾರು ಖನಿಜಗಳು, ಫೋಟೋಕೆಮಿಕಲ್ ಜೀವಸತ್ವಗಳು,ಹೆಚ್ಚಿನ ರೀತಿಯ ಪೋಷಕಾಂಶಗಳಿರುವುದರಿಂದ ಕ್ಯಾನ್ಸರ್ ಅನ್ನು ತಡೆಗಟ್ಟುವಲ್ಲಿ ದೇಹಕ್ಕೆ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.  ನಿಮ್ಮ ನಿತ್ಯದ ಜೀವನದಲ್ಲಿ ಶಾಕಾಹಾರವನ್ನು ಅಳವಡಿಸಿಕೊಳ್ಳುವುದರಿಂದ ಆರೋಗ್ಯಕರ ಮತ್ತು ದೀರ್ಘಾಯುಷ್ಯವನ್ನು ಪಡೆದುಕೊಳ್ಳಬಹುದು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions

2018ರ ವಿಧಾನಸಭಾ ಚುನಾವಣೆಯಲ್ಲಿ ನಿಮ್ಮ ಮತ ಯಾರಿಗೆ?

Loading ... Loading ...