ವ್ಯಾಲೆಂಟೈನ್ಸ್ ಡೇ : ಪ್ರೇಮಿಗಳ ಮೇಲೆ ವಿಹೆಚ್ ಪಿ ಕಾರ್ಯಕರ್ತರ ಕ್ರೂರ ವರ್ತನೆ!


Wednesday, February 14th, 2018 5:47 pm

ಜಮ್ಶೆಡ್ಪುರ್ : ದೇಶಾದ್ಯಂತ ಇಂದು ಪ್ರೇಮಿಗಳು ಇಂದು ವ್ಯಾಲೆಂಟೈನ್ಸ್ ಡೇ ಆಚರಿಸುತ್ತಿದ್ದು, ಜಾರ್ಖಂಡ್ ನ ಜಮ್ಶೆಡ್ಪುರದಲ್ಲಿ ವಿಶ್ವ ಹಿಂದೂ ಪರಿಷತ್ ಸಂಘಟನೆ ಕಾರ್ಯಕರ್ತರು ಪಾರ್ಕ್ ನಲ್ಲಿ ಕುಳಿತಿದ್ದ ಪ್ರೇಮಿಗಳ ಮೇಲೆ ಕ್ರೂರವಾಗಿ ವರ್ತಿಸಿದ್ದಾರೆ.

ಏಕಾಏಕಿ ಪಾರ್ಕ್ ನೊಳಗೆ ನುಗ್ಗಿರುವ ಕಾರ್ಯಕರ್ತರು ಪ್ರೇಮಿಗಳ ಮೇಲೆ ಹಲ್ಲೆ ಮಾಡಿದ್ದು, ಅಲ್ಲಿಂದ ತೆರಳುವಂತೆ ಎಚ್ಚರಿಕೆ ಸಹ ನೀಡಿದ್ದಾರೆ.  ಪಾರ್ಕ್ ನಲ್ಲಿ ಕುಳಿತುಕೊಂಡಿದ್ದ ಪ್ರೇಮಿಗಳು, ವಿವಾಹಿತ ದಂಪತಿಗಳು ವಿಹಚ್ ಪಿ ಕಾರ್ಯಕರ್ತರ ವರ್ತನೆಗೆ ಬೇಸರಗೊಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ.

 ಈ ವೇಳೆ ಸ್ಥಳದಲ್ಲಿ ಪೊಲಿಸರು ಉಪಸ್ಥಿತರಿದ್ದರೂ ಅವರ ಮೇಲೆ ಯಾವುದೇ ರೀತಿಯ ಕಾನೂನು ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions