ಹುತಾತ್ಮ ಯೋಧರಲ್ಲಿ ಜಾತಿವಾದ ಮಾಡುವುದು ಬೇಡ : ಜನರಲ್ ದೇವರಾಜ್


Wednesday, February 14th, 2018 5:11 pm

ನವದೆಹಲಿ : ಹುತಾತ್ಮ ಯೋಧರಲ್ಲೂ ಜಾತಿವಾದ ಮಾಡುವುದು ಬೇಡ. ಎಲ್ಲ ಯೋಧರು ದೇಶ ಸೇವೆಯ ಗುರಿ ಹೊಂದಿರುತ್ತಾರೆ ಎಂದು ನಾರ್ಥರ್ನ್ ಕಮಾಂಡ್ ಚೀಫ್ ಜನರಲ್ ದೇವರಾಜ್ ಅನ್ಖು ತಿಳಿಸಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಇತ್ತೀಚಿಗೆ ನಡೆದ ದಾಳಿಯಲ್ಲಿ ಮೃತಪಟ್ಟ ಏಳು ಮಂದಿಯ ಪೈಕಿ ಹಲವಾರು ಮುಸ್ಲಿಂರಾಗಿದ್ದು, ಮುಸ್ಲಿಮರೆಲ್ಲೂ ಪಾಕಿಸ್ತಾನಿಗಳು ಎಂದು ಹೇಳುವವರಿಗೆಲ್ಲಾ ಇದನ್ನು ನೋಡಿ ತಿಳಿದುಕೊಳ್ಳಬೇಕು ಎಂದು ಓವೈಸಿ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ದೇವರಾಜ್, ನಾವು ಎಲ್ಲರಿಗೂ ಯೋಧರ ವಿಷಯವನ್ನು ಜಾತಿವಾದ ಮಾಡುವುದಿಲ್ಲ. ಸೇನೆಯ ಬಗ್ಗೆ ಅರಿಯದಿರುವವರು ಮಾತ್ರ ಇಂಥ ಹೇಳಿಕೆಗಳನ್ನು ನೀಡುತ್ತಾರೆ ಎಂದಿದ್ದಾರೆ. ಈ ರೀತಿಯ ಹೇಳಿಕೆಗಳನ್ನು ನಾಯಕರು ನೀಡುವ ಮುನ್ನ ಹಲವು ಬಾರಿ ಯೋಚಿಸಬೇಕು ಎಂದು ಹೇಳಿದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions