ಬಿಗ್ ನ್ಯೂಸ್ : ಕಣ್ಣೀರು ಹಾಕಿದ ಹೆಚ್‍ಡಿಕೆ, ಕಾರಣ ಏನು ಗೊತ್ತಾ?


Wednesday, February 14th, 2018 6:35 pm


ಬೆಂಗಳೂರು: ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಕಣ್ಣೀರು ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೌದು. ಬೆಂಗಳೂರಿನ ಟೌನ್‍ಹಾಲ್‍ನಲ್ಲಿ ಆಟೋ, ಕಾರು, ಲಾರಿ ಚಾಲಕರು ಮತ್ತು ಮಾಲೀಕರ ಸಂವಾದದ ವೇಳೆ ಈ  ಹೆಚ್‍ಡಿ ಕುಮಾರಸ್ವಾಮಿ ಕಣ್ಣೀರು ಹಾಕಿದ ಘಟನೆ ಸಾಕ್ಷಿಯಾಯಿತು.

ಕಾರ್ಯಕ್ರಮದಲ್ಲಿ ಹೆಚ್.ಡಿ.ಕೆ ಅವರಿಗೆ ನೀವೇ ನಮ್ಮ ಕುಟುಂಬಕ್ಕೆ ದೇವರು ಅಂತ ಹೇಳಿದ ಕುಟುಂಬವೊಂದರ ಮಾತಿನಿಂದ ಭಾವುಕರಾಗಿ ಹೆಚ್‍ಡಿಕೆ ಕಣ್ಣೀರು ಹಾಕಿದ್ರು. ಹೊಸಕೋಟೆಯ ಎಮ್ಮಂಡಹಳ್ಳಿಯ ಕಾರು ಚಾಲಕ ಸಂಪಂಗಿ ಮತ್ತು ಸಂಧ್ಯಾರಾಣಿ ದಂಪತಿಯ 11 ವರ್ಷ ಮಗಳು ಮೊನಿಕಾಗೆ ರೋಗನಿರೋಧಕ ಶಕ್ತಿ ವಿರಲಿಲ್ಲವಂತೆ.

ಈ ವೇಳೆ ಮೊನಿಕಾ ಪೋಷಕರು ಎಷ್ಟು ಚಿಕಿತ್ಸೆ ಕೊಡಿಸಿದ್ರೂ ಏನೂ ಪ್ರಯೋಜನ ಆಗಿರಲಿಲ್ಲ. ಇದರಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದೆವು. ಆಗ ನೆರವಿಗೆ ಬಂದ ಹೆಚ್‍ಡಿ ಕುಮಾರಸ್ವಾಮಿ 30 ಲಕ್ಷ ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಕೊಡಿಸಿದ್ರು. ಅವರೇ ನಮ್ಮ ಕುಟುಂಬಕ್ಕೆ ದೇವರು ಅಂತ ಮೋನಿಕಾ ತಂದೆ ಸಂಪಂಗಿ ಹೇಳಿದ್ರು. ತಮ್ಮಿಂದ ಸಹಾಯ ಪಡೆದ ಕುಟುಂಬದ ಮಾತು ಕೇಳಿ ಕುಮಾರಸ್ವಾಮಿ ಕಣ್ಣಾಲಿಗಳು ಒದ್ದೆಯಾದವು

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions