ನಿಮ್ಮ ಆಯಸ್ಸು ಹೆಚ್ಚಾಗಬೇಕೇ..? ಅದಕ್ಕೆ ಹೀಗೆ ಮಾಡಲೇಬೇಕು..!


Sunday, February 11th, 2018 4:10 pm

ಸ್ಪೆಷಲ್ ಡೆಸ್ಕ್: ಹುಟ್ಟಿದ ಮನುಷ್ಯ, ಪ್ರಾಣಿಗೆ ವಯಸ್ಸು ಅನ್ನುವುದು ಇರುತ್ತದೆ. ಹುಟ್ಟು ಆಕಸ್ಮಿಕ. ಸಾವು ಖಚಿತ ಅನ್ನುವುದು ಜಗ ನಂಬಿದ ಸತ್ಯ. ಸಾವನ್ನ ಯಾರೂ ಕೂಡಾ ತಡೆಯಲು ಸಾಧ್ಯ ಇಲ್ಲ. ಅದು ಆಗುವುದು ಕೂಡಾ ಇಲ್ಲ. ಆದರೆ ಮಾನವನ ಜೀವನ ಕಾಲವನ್ನ ದೀರ್ಘಗೊಳಿಸಬಹುದು. ಅದೇಗೆ ಗೊತ್ತೇ..?

ಗರುಡ ಪುರಾಣದಲ್ಲಿ ಏನಿರುತ್ತದೆ ಎಂಬುದು ನಮಗೆಲ್ಲರಿಗೂ ಗೊತ್ತೇ ಇದೆ. ಮನುಷ್ಯನ ಜೀವನ ಕಾಲ ಹೆಚ್ಚಾಗಬೇಕಾದರೆ ಏನು ಮಾಡಬೇಕು ಎಂಬುದರ ಕುರಿತು ಇದರಲ್ಲಿ ಬರೆಯಲಾಗಿದೆ.

* ರಾತ್ರಿ ಹೊತ್ತು ಊಟದಲ್ಲಿ ಮೊಸರು ತಿನ್ನಬಾರದು. ಯಾಕೆಂದರೆ ಆ ಸಮಯದಲ್ಲಿ ಸರಿಯಾಗಿ ಅದು ಜೀರ್ಣವಾಗಲ್ಲ. ಇದರಿಂದ ಅನಾರೋಗ್ಯ ಸಮಸ್ಯೆಗಳು ಬಂದು ಜೀವನ ಕಾಲ, ಆಯಸ್ಸು ಕಡಿಮೆಯಾಗುತ್ತದೆ.
* ರಾತ್ರಿ ಹೊತ್ತು ಬಹಳಷ್ಟು ಮಂದಿ ಊಟ ಮಾಡಿದ ಕೂಡಲೇ ನಿದ್ದೆಗೆ ಜಾರುತ್ತಾರೆ. ಈ ರೀತಿ ಮಾಡಬಾರದು. ತಿಂದ ಕೂಡಲೇ ನಿದ್ರಿಸಿದರೆ ಅನಾರೋಗ್ಯ ಉಂಟಾಗಿ ಜೀವನ ಕಾಲ ಕುಗ್ಗುತ್ತದೆ.
* ರಾತ್ರಿ ಹೊತ್ತು ಮಾಂಸಾಹಾರ ತಿನ್ನಬಾರದು. ತಿಂದರೆ ಅದು ಸರಿಯಾಗಿ ಜೀರ್ಣವಾಗದೇ ಅನಾರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಇದರಿಂದ ಅನಾರೋಗ್ಯ ಕಾರಣ ಮಾನವನ ಆಯಸ್ಸು ಕಡಿಮೆಯಾಗುತ್ತದೆ.
* ಕೆಲವರು ಬೆಳಗ್ಗೆ ತಡವಾಗಿ ನಿದ್ದೆಯಿಂದ ಏಳುತ್ತಾರೆ. ಆ ರೀತಿ ಮಾಡುವುದರಿಂದ ಅನಾರೋಗ್ಯ ಸಮಸ್ಯೆಗಳು ಬಂದು ಅವು ಜೀವನ ಕಾಲವನ್ನು ಕಡಿಮೆ ಮಾಡುತ್ತವೆ. ಆದ ಕಾರಣ ಯಾರೇ ಆಗಲಿ ಬೆಳಗ್ಗೆ ಬೇಗ ನಿದ್ದೆಯಿಂದ ಏಳಬೇಕು. ತಡ ಮಾಡಬಾರದು. ಇನ್ನು ಬೆಳಗ್ಗೆ ನಿದ್ದೆಯಿಂದ ಏಳುವುದರಿಂದ ಆ ಸಮಯದಲ್ಲಿ ಬರುವ ಗಾಳಿ ಸೇವಿಸಿದರೆ ಅನಾರೋಗ್ಯ ಸಮಸ್ಯೆಗಳು ದೂರವಾಗುತ್ತವೆ.
* ಸ್ಮಶಾನದಲ್ಲಿ ದಹನ ಕಾರ್ಯಗಳನ್ನು ನಿರ್ವಹಿಸಿದ ಕೂಡಲೇ ಮನೆಗೆ ಸೇರಿಕೊಳ್ಳಬೇಕು. ಯಾಕೆಂದರೆ ಅಲ್ಲಿ ಇರುವ ಬ್ಯಾಕ್ಟೀರಿಯಾಗಳು ನಮ್ಮ ದೇಹದಲ್ಲಿ ಸೇರಿಕೊಂಡರೆ ಅನಾರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಅದರಿಂದ ನಾವು ಶೀಘ್ರವಾಗಿ ಸಾಯಬೇಕಾಗುತ್ತದೆ. ಇದರಿಂದ ಜೀವನ ಕಾಲ ಕಡಿಮೆಯಾಗುತ್ತದೆ.
*ಗಂಡ ಹೆಂಡತಿ ರಾತ್ರಿ ಹೊತ್ತೇ ಶೃಂಗಾರದಲ್ಲಿ ಪಾಲ್ಗೊಳ್ಳಬೇಕಂತೆ. ಬೆಳಗ್ಗೆ ಹೊತ್ತು ಮಾಡಬಾರದಂತೆ. ಮಾಡಿದರೆ ಆಯಸ್ಸು ಕಡಿಮೆಯಾಗುತ್ತದೆ. ಆ ಸಮಯದಲ್ಲಿ ಮನುಷ್ಯನ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಅಂತಹ ಸಮಯದಲ್ಲಿ ಶೃಂಗಾರದಲ್ಲಿ ಪಾಲ್ಗೊಂಡರೆ ಬರುವ ಅನಾರೋಗ್ಯ ಸಮಸ್ಯೆಗಳು ಮನುಷ್ಯನ ಆಯಸ್ಸನ್ನು ಕಡಿಮೆ ಮಾಡುತ್ತವೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions

2018ರ ವಿಧಾನಸಭಾ ಚುನಾವಣೆಯಲ್ಲಿ ನಿಮ್ಮ ಮತ ಯಾರಿಗೆ?

Loading ... Loading ...