ನಿಮ್ಮ ಬಾಯಿ ದುರ್ವಾಸನೆಗೆ ಸುಲಭ ಮನೆ ಮದ್ದು ಇಲ್ಲಿದೆ ಓದಿ!


Tuesday, February 13th, 2018 11:25 am

ಸ್ಪೆಷಲ್ ಡೆಸ್ಕ್: ಕೆಲವರು ಇರುತ್ತಾರೆ. ಬಾಯಿ ಬಿಟ್ಟರೆ ಸಾಕು, ದೂರ ಓಡಬೇಕಾದ ಪರಿಸ್ಥಿತಿ. ಯಾಕೆಂದರೆ ಅವರ ಬಾಯಿಯಿಂದ ಬರುವ ದುರ್ವಾಸನೆಯೇ ಕಾರಣ. ಇದನ್ನ ಮನೆ ಮದ್ದಿನ ಮೂಲಕ ಹೋಗಲಾಡಿಸಬಹುದು. ‘ವಾಸನೆ’ ಓಡಿಸುವ ಮನೆ ಮದ್ದು ಹೀಗಿದೆ ಓದಿ

* ದಾಲ್ಚಿನ್ನಿ: ದಾಲ್ಚಿನ್ನಿಯಲ್ಲಿ ಬ್ಯಾಕ್ಟೀರಿಯಾ ನಿರೋಧಕ ಗುಣ ಇದೆ. ಇದು ಉಸಿರಿನ ದುರ್ವಾಸನೆ ಹೋಗಲಾಡಿಸುತ್ತದೆ. ಇದನ್ನ ಹಾಗೆಯೇ ತಿನ್ನಬಹುದು. ಇಲ್ಲವೇ ಚಹಾದಲ್ಲಿ ಹಾಕಿ ಕುಡಿಯಬಹುದು. ಬಿಸಿ ನೀರಿಗೆ ಹಾಕಿಯೂ ಸೇವಿಸಬಹುದು.
* ಸೋಂಪು: ಸೋಂಪು ಆರೋಗ್ಯಕ್ಕೆ ಒಳ್ಳೆಯದು. ಊಟದ ನಂತರ ಇದನ್ನ ಸೇವಿಸಿವುದರಿಂದ ಜೀರ್ಣ ಕ್ರಿಯೆ ಸುಲಭವಾಗುತ್ತದೆ. ಕೆಟ್ಟ ಉಸಿರಿಗೆ ಬ್ಯಾಕ್ಟೀರಿಯಾ ಸಾಯಿಸಿದುವುದಲ್ಲದೇ ಗ್ಯಾಸ್ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.
*ಪುದೀನಾ: ಮೌತ್ ಫ್ರೆಶ್ನನರ್ ಗಳಲ್ಲಿ ಪುದಿನಾವನ್ನ ಬಳಸುತ್ತಾರೆ. ಅದು ತಂಪು ಅನುಭವ ನೀಡುತ್ತದೆ. ಇದರ ಚಹಾ ಕುಡಿಯುವುದರಿಂದ ಅಥವಾ ಪುದಿನಾ ತಿನ್ನುವುದರಿಂದ ದುರ್ವಾಸನೆ ಹೋಗಲಾಡಿಸಬಹುದು.
* ಏಲಕ್ಕಿ: ಇದರ ಕಾಳುಗಳನ್ನು ಬಾಯಲ್ಲಿ ಹಾಕಿಕೊಂಡು ಜಗಿಯಬೇಕು. ಊಟದ ನಂತರ ಏಲಕ್ಕಿ ಚಹಾ ಕುಡಿಯಬೇಕು.
*ಸಾಸಿವೆ ಎಣ್ಣೆ: ಒಂದು ಚಮಚ ಸಾಸಿವೆ ಎಣ್ಣೆಯನ್ನು ಬಾಯಲ್ಲಿ 30 ಸೆಕೆಂಡ್ ಇಟ್ಟುಕೊಂಡು ನಂತರ ಉಗಿಯಿರಿ.
* ಗ್ರೀನ್ ಟೀ: ನಿಮ್ಮ ಉಸಿರನ್ನು ಸ್ವಚ್ಛವಾಗಿಟ್ಟುಕೊಳ್ಳಲು ಪ್ರತಿ ದಿನ ಒಂದು ಕಪ್ ಗ್ರೀನ್ ಟೀ ಕುಡಿಯಿರಿ. ಇದುವೇ ಬಾಯಿ ವಾಸನೆ ಓಡಿಸುವ ಮನೆ ಮದ್ದು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions

2018ರ ವಿಧಾನಸಭಾ ಚುನಾವಣೆಯಲ್ಲಿ ನಿಮ್ಮ ಮತ ಯಾರಿಗೆ?

Loading ... Loading ...