ಸುಭಾಷಿತ :

Tuesday, September 17 , 2019 6:53 AM

-->

ಟೊಮೇಟೊವನ್ನು ಹೀಗೂ ಬಳಕೆ ಮಾಡಬಹುದು ಗೊತ್ತಾ ನಿಮಗೆ?


Tuesday, August 20th, 2019 1:17 pm

ಸ್ಪೆಷಲ್ ಡೆಸ್ಕ್ : ಟೊಮೇಟೊ ಸಾರು, ಗೊಜ್ಜು, ಚಟ್ನಿ, ಸೂಪ್ ಏನೇನೋ ಮಾಡಿ ಸೇವಿಸುತ್ತೀರಿ. ಈ ಬಾರಿ ಅದನ್ನು ಸೌಂದರ್ಯಕ್ಕೂ ಸ್ವಲ್ಪ ಉಪಯೋಗಿಸಿ. ಇದರಿಂದ ತ್ವಚೆ ಸುಂದರ ಜೊತೆ ಸಾಫ್ಟ್ ಆಗುತ್ತದೆ. ನೀವೂ ಕೂಡ ಒಮ್ಮೆ ಇದನ್ನ ಟ್ರೈ ಮಾಡಿ ನೋಡಿ…

ಟೊಮೆಟೊ ಪೇಸ್ಟ್ ಗೆ ಸ್ವಲ್ಪ ಓಟ್ ಮೀಲ್ಸ್ ಮತ್ತು ಒಂದು ಚಮಚ ಮೊಸರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 2-3 ನಿಮಿಷ ಮಸಾಜ್ ಮಾಡಿ. ೨೦ ನಿಮಿಷದ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಇದರಿಂದ ಬಿಸಿಲಿನಿಂದ ಕಪ್ಪಾದ ಮುಖಕ್ಕೆ ಮತ್ತೆ ತ್ವಚೆ ಹೊಳೆಯುತ್ತದೆ.
ಟೊಮಟೊ ಪೇಸ್ಟ್ ಮಾಡಿ ನಿಂಬೆ ರಸ ಹಾಕಿ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 10 ನಿಮಿಷ ಬಿಡಿ. ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.ಈ ರೀತಿ ದಿನಾ ಮೊಡವೆ ಕಡಿಮೆಯಾಗುತ್ತದೆ.
ಟೊಮೆಟೊ ಮತ್ತು ಮುಲ್ತಾನಿ ಮಿಟ್ಟಿ ಮಿಶ್ರ ಮಾಡಿ ಹಚ್ಚಿದರೆ ತುಂಬಾ ಪ್ರಯೋಜನ ಪಡೆಯಬಹುದು. ಹೀಗೆ ಮುಖಕ್ಕೆ ಹಚ್ಚಿಕೊಂಡು 10 ನಿಮಿಷಗಳಿಗಿಂತ ಅಧಿಕ ಕಾಲ ಬಿಡಬೇಡಿ. ನಂತರ ಹದ ಬಿಸಿ ನೀರಿನಿಂದ ಮುಖವನ್ನು ಶುಚಿಗೊಳಿಸಿ.
ಮೂಗಿನ ಹತ್ತಿರ ಬ್ಲ್ಯಾಕ್ ಹೆಡ್ಸ್ ಇದ್ದರೆ ಆ ಭಾಗಕ್ಕೆ ಟೊಮೆಟೊದಿಂದ ಉಜ್ಜಿದರೆ ಬ್ಲ್ಯಾಕ್ ಹೆಡ್ಸ್ ಹೋಗಲಾಡಿಸಬಹುದು.
ಗಂಧದ ಪುಡಿಯನ್ನು ಬಳಸಿ. ಈ ಗಂಧದ ಪುಡಿಯನ್ನು ಟೊಮೆಟೊ ರಸದ ಜೊತೆ ಮಿಶ್ರ ಮಾಡಿ ಹಚ್ಚಿದರೆ ತ್ವಚೆಯ ಕಾಂತಿ ಹೆಚ್ಚುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions