ಸ್ಮಾರ್ಟ್ ಸಿಟಿ ಅಧಿಕಾರಿಗಳಂತೆ ಬಂದು 20 ಲಕ್ಷ ರೂ. ಚಿನ್ನಾಭರಣ ದೋಚಿ ಪರಾರಿ


Friday, June 15th, 2018 9:46 am

ತುಮಕೂರು: ಸ್ಮಾರ್ಟ್ ಸಿಟಿ ಅಧಿಕಾರಿಗಳಂತೆ ಬಂದು ವೃದ್ಧೆಯನ್ನು ವಂಚಿಸಿ ಸುಮಾರು 20 ಲಕ್ಷ ರೂ. ಗೂ ಅಧಿಕ ಬೆಲೆಬಾಳುವ ಚಿನ್ನಾಭರಣ ದೋಚಿದ ಘಟನೆ ತುಮಕೂರು ನಗರದಲ್ಲಿ ನಡೆದಿದೆ.

ಮನೋಹರಾ ವಂಚನೆಗೆ ಒಳಗಾದ ವೃದ್ಧೆ ಮಹಿಳೆಯಾಗಿದ್ದಾರೆ.  ಗುರುವಾರ ಮಧ್ಯಾಹ್ನ ಸ್ಮಾರ್ಟ್ ಸಿಟಿ ಅಧಿಕಾರಿಗಳಂತೆ ಬಂದ ಮೂವರು ಕಳ್ಳರು, ನಿಮ್ಮ ಮನೆಗೆ ಯುಜಿಡಿ ಕನೆಕ್ಷನ್ ಕೊಡಬೇಕಾಗಿದೆ ಅಂತ ಮನೆಗೊಳಗೆ ಬಂದಿದ್ದಾರಂತೆ.

ಇದೇ ವೇಳೆ ಇಬ್ಬರು ಮನೋಹರಾ ಅವರನ್ನು ಮನೆಯ ಮೇಲೆ ಕರೆದುಕೊಂಡು ಹೋಗಿದ್ದಾರೆ. ಮನೆಯಲ್ಲಿ ಉಳಿದುಕೊಂಡಿದ್ದ ವ್ಯಕ್ತಿ ಪಕ್ಕದಲ್ಲಿಯೇ ಇದ್ದ ಕೀಲಿ ತಗೆದುಕೊಂಡು ಬೀರು ತೆರೆದು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ.

ಚಿನ್ನಾಭರಣ ದೋಚಿರುವುದು ರಾತ್ರಿ 8 ಗಂಟೆಗೆ ವೃದ್ಧೆಯ ಗಮನಕ್ಕೆ ಬಂದಿದೆ. ಕಳ್ಳರು ಡೈಮಂಡ್ ನೆಕ್ಲೆಸ್ ಸೇರಿದಂತೆ ಸುಮಾರು 20 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾರೆ. ಈ ಸಂಬಂಧ ಹೊಸಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,  ಸ್ಥಳಕ್ಕೆ ಹಿರಿಯ ಪೋಲಿಸ್ ಅಧಿಕಾರಿಗಳು ಹಾಗೂ ಬೆರಳಚ್ಚು ಸಿಬ್ಬಂದಿ ಆಗಮಿಸಿ ಪರೀಶಿಲನ ನಡೆಸಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions