ಸುಭಾಷಿತ :

Saturday, October 19 , 2019 4:28 PM

ಟಿಕ್​ ಟಾಕ್ ಮಾಡೋ ಮುನ್ನ ಹುಷಾರ್ : ಟಿಕ್ ಟಾಕ್ ಗಾಗಿ ಜಂಪ್.. ಬೆನ್ನು ಮೂಳೆಯೇ ಕಟ್​..!


Tuesday, June 18th, 2019 1:09 pm


ತುಮಕೂರು : ಟಿಕ್ ಟಾಕ್‌ ಮಾಡಲು ಹೋಗಿ ಯುವಕನೊಬ್ಬ ತನ್ನ ಬೆನ್ನಿನ ಮೂಳೆಯನ್ನೇ ಮುರಿದುಕೊಂಡಿರುವ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಗೋಡೆಕರೆಯಲ್ಲಿ ನಡೆದಿದೆ. 

ಹೀಗೆ ಗಾಯಮಾಡಿಕೊಂಡಿರುವ ಯುವಕನನ್ನು ಕುಮಾರ್ ಅಂತ ಗುರುತಿಸಿಲಾಗಿದ್ದು, ಕುಮಾರ್‌ ತನ್ನ ಸ್ನೇಹಿತ ಜೊತೆ ಸೇರಿಕೊಂಡು ಸ್ಲೋ ಮೋಷನ್​​ನಲ್ಲಿ ದೂರದಿಂದ ಓಡಿ ಬಂದು ಉಲ್ಟಾ ನೆಗೆಯಲು ಯತ್ನಿಸಿದ ಕುಮಾರ್, ಕುತ್ತಿಗೆ ಕೆಳಮುಖವಾಗಿ ಬಿದ್ದು ಸ್ಪೈನಲ್ ಕಾರ್ಡ್ ಮುರಿದುಕೊಂಡಿದ್ದಾನೆ. ಮೆದುಳಿನ ನಡುವಿನ ಭಾಗದಲ್ಲಿ ಕುಮಾರ್​ಗೆ ಪೆಟ್ಟಾಗಿದ್ದರಿಂದ ಅವರು ಈಗ ನಡೆಯಲೂ ಆಗದ ಸ್ಥಿತಿ ತಲುಪಿದ್ದಾರೆ. ಇನ್ನು ಕುಮಾರ್​ ಚಿಕಿತ್ಸೆಗೆ ಕನಿಷ್ಟ 10 ಲಕ್ಷ ರೂಪಾಯಿ ವೆಚ್ಚವಾಗುತ್ತೆ ಅಂತಾ ಆಸ್ಪತ್ರೆ ತಿಳಿಸಿದ್ದು ಸದ್ಯ ಕುಮಾರ್‌ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ ಎನ್ನಲಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions