-->

ತ್ರಯಂಬಕಂ: ಅನುಪಮಾ ಗೌಡ ಪಾತ್ರ ಹೇಗಿದೆ ಗೊತ್ತಾ?


Monday, April 15th, 2019 8:09 pm

ಸಿನಿಮಾಡೆಸ್ಕ್: ಅಕ್ಕ ಎಂಬ ಧಾರಾವಾಹಿಯ ಮೂಲಕವೇ ಕಿರುತೆರೆ ಪ್ರೇಕ್ಷಕರ ನಡುವೆ ಮನೆ ಮಾತಾಗಿರುವವರು ಅನುಪಮಾ ಗೌಡ. ಈ ಸೀರಿಯಲ್ಲಿನಲ್ಲಿ ಡಬಲ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದ ಅನುಪಮಾ ನಟನೆಯ ಮೂಲಕವೇ ಅಪಾರ ಅಭಿಮಾನಿ ಬಳಗವವನ್ನೂ ತನ್ನದಾಗಿಸಿಕೊಂಡಿದ್ದರು. ಅವರು ಬಿಗ್ ಬಾಸ್ ಶೋ ನಂತರದಲ್ಲಿ ದಯಾಳ್ ಪದ್ಮನಾಭನ್ ನಿರ್ದೇಶನದ ಆ ಕರಾಳ ರಾತ್ರಿ ಚಿತ್ರದ ಮೂಲಕ ಹಿರಿತೆರೆಯಲ್ಲಿಯೂ ನಾಯಕಿಯಾಗಿ ಗಮನ ಸೆಳೆದಿದ್ದರು.

ಹೀಗೆ ಸಾಗಿ ಬಂದಿರೋ ಅನುಪಮಾ ಅವರೀಗ ದಯಾಳ್ ನಿರ್ದೇಶನದ ತ್ರಯಂಬಕಂ ಚಿತ್ರದ ಮುಖ್ಯ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ನಟನೆಗೆ ಅವಕಾಶವಿರುವ, ಸವಾಲಿನದ್ದಾದ ಈ ಪಾತ್ರದಲ್ಲಿ ಅನುಪಮಾ ಅದ್ಭುತವಾಗಿ ನಟಿಸಿದ್ದಾರೆಂಬ ಮೆಚ್ಚುಗೆ ಚಿತ್ರತಂಡದ ಕಡೆಯಿಂದಲೇ ಕೇಳಿ ಬರುತ್ತಿದೆ.

ತ್ರಯಂಬಕಂ ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯ ಕಥಾ ಹಂದರ ಹೊಂದಿದೆ. ಆದರಿಲ್ಲಿ ಅಪ್ಪ ಮಗಳ ಸಂಬಂವೂ ಪೃಧಾನ ಪಾತ್ರ ವಹಿಸಿದೆ. ಅನುಪಮಾ ಅವರಿಲ್ಲಿ ರಾಘಣ್ಣನ ಮಗಳ ಪಾತ್ರ ಮಾಡಿದ್ದಾರೆ. ಜೊತೆಗೆ ಪತ್ರಕರ್ತೆಯಾಗಿಯೂ ಅಭಿನಯಿಸಿದ್ದಾರೆ. ಅವರ ಪಾತ್ರಕ್ಕೆ ಪೌರಾಣಿಕ ಕಾಲಮಾನದ ಶೇಡೂ ಇದೆಯಾ ಎಂಬ ಕ್ಯೂರಿಯಾಸಿಟಿ ಕೂಡಾ ಎಲ್ಲರಲ್ಲಿದೆ.

ಅನುಪಮಾ ಪ್ರತಿಭಾವಂತ ನಟಿ. ಅವರಿಗೆ ತ್ರಯಂಬಕಂ ಪಾತ್ರದ ಮೂಲಕವೇ ಕಮರ್ಶಿಯಲ್ ಬ್ರೇಕೊಂದು ಸಿಗುವ ಲಕ್ಷಣಗಳಿವೆ. ದಯಾಳ್ ಎಂದಿನಂತೆಯೇ ಮುತುವರ್ಜಿಯಿಂದ ನಿರ್ದೇಶನ ಮಾಡಿರುವ ಈ ಚಿತ್ರ ಈ ವಾರ ಅದ್ದೂರಿಯಾಗಿ ತೆರೆ ಕಾಣುತ್ತಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions