ಹೇಗಿದೆ ಗೊತ್ತಾ, ವಿಜಯ್ ಮಲ್ಯ ಇರಲಿರುವ ಆರ್ಥರ್ ರೋಡ್ ಜೈಲಿನ ಬ್ಯಾರಕ್ 12!? ಇಲ್ಲಿದೆ ನೋಡಿ ಡಿಟೈಲ್ಸ್


Monday, December 10th, 2018 6:35 pm


ಮುಂಬೈ: ವಿಜಯ್ ಮಲ್ಯ ಗಡಿ ಪಾರು ಪ್ರಕರಣ ಯುಕೆಯ ಕೋರ್ಟ್ ನಲ್ಲಿ ಇತ್ಯರ್ಥವಾಗಿದ್ದು, ವಿಜಯ್ ಮಲ್ಯ ಅವರನ್ನು ಗಡಿಪಾರು ಮಾಡುವಂತೆ ಆದೇಶ ನೀಡಿದೆ.

ಇನ್ನು ಇದೇ ವೇಳೆ ವಿಜಯ್ ಮಲ್ಯ ಲಂಡನ್ ಕೋರ್ಟ್ ನಲ್ಲಿ ಭಾರತದಲ್ಲಿರುವ ಜೈಲಿನಲ್ಲಿರುವ ವ್ಯವಸ್ಥೆಗೆ ಬಗ್ಗೆ ಕೆಟ್ಟದಾಗಿ ಮಾತನಾಡಿ, ನಾನು ಅಲ್ಲಿಗೆ ಹೋಗುವುದಕ್ಕೆ ಸಾಧ್ಯವಾಗುವಿಲ್ಲ, ಅಲ್ಲಿಗೆ ಹೋದರೆ ಸಾಕಷ್ಟು ತೊಂದರೆಯುಂಟಾಗುತ್ತದೆ ಆಂತ ಹೇಳಿದರು.

ಇನ್ನು ವಿಜಯ್ ಮಲ್ಯ ಅವರ ಮಾತಿಗೆ ಅನುಗುಣವಾಗಿ ಲಂಡನ್ ಕೋರ್ಟ್ ವಿಜಯ್ ಮಲ್ಯ ಅವರನ್ನು ಬಂಧಿಸಿದರೇ ಯಾವ ಜೈಲಿನಲ್ಲಿ ಇರಿಸಲಿದ್ದೀರಾ? ಅಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡುವಂತೆ ಭಾರತವನ್ನು ಕೇಳಿಕೊಂಡಿತ್ತು.

ಇದೇ ವೇಳೆ ಮುಂಬೈನ ಆರ್ಥರ್ ಜೈಲಿನ ವಿಡಿಯೋ ತುಣುಕನ್ನು ಲಂಡನ್ ನ್ಯಾಯಾಧೀಶರಿಗೆ ಸಲ್ಲಿಸಿದ್ರು, ಆರ್ಥರ್ ಜೈಲಿನ ‘ಬ್ಯಾರಕ್ 12’ ನಲ್ಲಿ ಮಲ್ಯರನ್ನು ಇರಿಸಲು ಸಿದ್ಧತೆ ನಡೆಸಲಾಗಿದೆ.

ಇನ್ನು ಮುಂಬೈನ ಆರ್ಥರ್ ಜೈಲಿನ ‘ಬ್ಯಾರಕ್ 12’ನಲ್ಲಿರುವ ಕೊಠಡಿಗಳಲ್ಲಿ ತಲಾ ಒಬ್ಬ ಕೈದಿಯನ್ನು ಮಾತ್ರ ಇರಿಸಲಾಗುತ್ತದೆ. ಎರಡು ಮಹಡಿಯಲ್ಲಿ ಒಟ್ಟು 16 ಕೊಠಡಿಗಳಿವೆ. ಅತಿ ಗಣ್ಯರು ಅಥವಾ ಅಪಾಯಕಾರಿ ಕೈದಿಗಳಿಗೆ ಈ ಬ್ಯಾರಕ್ ಮೀಸಲಿಡಲಾಗಿದೆ. ಅತಿ ಗಣ್ಯರು ಅಥವಾ ಅಪಾಯಕಾರಿ ಕೈದಿಗಳಿಗೆ ಈ ಬ್ಯಾರಕ್ ಅನ್ನು ಮೀಸಲಿರಸಲಾಗಿದೆ. ಇಲ್ಲಿ ಪ್ರತ್ಯೇಕ ಅಂಗಳಶೌಚಗೃಹ, ಬಟ್ಟೆ ಒಗೆಯಲು ಹಾಗೂ ಮಲಗಲು ಕೊಠಡಿಯೊಳಗೆ ಇರಲಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions