ಮಂಗಳೂರು ಪಾಲಿಕೆಯ ಗದ್ದುಗೆ ಹಿಡಿದ ಕಾಂಗ್ರೆಸ್ : ಭಾಸ್ಕರ್ ಕೆ. ಮೊಯಿಲಿ‌ ಮೇಯರ್ ಹಾಗೂ ಕೆ. ಮೊಹಮ್ಮದ್ ಉಪ ಮೇಯರ್ ಆಗಿ ಆಯ್ಕೆ


Thursday, March 8th, 2018 2:07 pm

ಮಂಗಳೂರು: ಮೇಯರ್ ಚುನಾವಣೆಯಲ್ಲಿ ಭಾಸ್ಕರ್ ಕೆ. ಮೊಯಿಲಿ‌ ಮೇಯರ್ ಹಾಗೂ ಕೆ. ಮೊಹಮ್ಮದ್ ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಭಾಸ್ಕರ್ ಪರವಾಗಿ ಆಡಳಿತ ಪಕ್ಷವಾದ ಕಾಂಗ್ರೆಸ್‌ನ 35 ಸದಸ್ಯರು ಹಾಗೂ ಇಬ್ಬರು ಶಾಸಕರು ಸೇರಿದಂತೆ 37 ಮಂದಿ ಮತ ಚಲಾಯಿಸಿದ್ದರು.

ಭಾಸ್ಕರ್ ವಿರುದ್ಧ ಬಿಜೆಪಿಯ ಸುರೇಂದ್ರ 19 ಮತ ಪಡೆದರು. ಉಪ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಮೀರಾ ಬಿ. ಕರ್ಕೇರ ಸ್ಪರ್ಧಿಸಿದ್ದರುಒಟ್ಟು 65 ಮಂದಿ ಮತದಾರರಿದ್ದು, 61 ಮಂದಿ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. 5 ಮಂದಿ ( 2ಜೆಡಿಎಸ್, 1 ಸಿಪಿಐಎಂ, 1ಎಸ್‌ಡಿಪಿಐ, 1 ಪಕ್ಷೇತರ) ತಟಸ್ಥರಾಗಿದ್ದರು.

ಚುನಾವಣಾಧಿಕಾರಿಯಾಗಿ ಮೈಸೂರು ಪ್ರಾದೇಶಿಕ ಆಯುಕ್ತರಾದ ಶಿವಯೋಗಿ ಸಿ. ಕಳಸದ ಕಾರ್ಯನಿರ್ವಹಿಸಿದರು. ಸ್ಥಾಯಿ ಸಮಿತಿಗಳ ಅಧ್ಯಕ್ಷರಾಗಿ ಪ್ರವೀಣ್ ಚಂದ್ರ ಆಳ್ವ, (ನಗರ ಯೋಜನೆ), ನವೀನ್ ಡಿಸೋಜಾ (ಆರೋಗ್ಯ), ರಾಧಾಕೃಷ್ಣ ( ತೆರಿಗೆ), ಲತಾ ಸಾಲ್ಯಾನ್ (ಲೆಕ್ಕಪತ್ರ) ಆಯ್ಕೆಯಾಗಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions