ಸುಭಾಷಿತ :

Saturday, October 19 , 2019 4:36 PM

`ಬಸ್ ಡೇ’ ಆಚರಿಸುವಾಗ ಬಸ್ ಟಾಪ್ ನಿಂದ ಬಿದ್ದ ವಿದ್ಯಾರ್ಥಿಗಳು! ವೀಡಿಯೋ ವೈರಲ್


Tuesday, June 18th, 2019 1:11 pm

ಚೆನ್ನೈ : ಬಸ್ ಡೇ ಆಚರಣೆ ವೇಳೆ ಬಸ್ ಟಾಪ್ ನಲ್ಲಿ ಕುಳಿತಿದ್ದ ವಿದ್ಯಾರ್ಥಿಗಳು ಬ್ರೇಕ್ ಹಾಕಿದ ವೇಳೆ ಕೆಳಗೆ ಬಿದ್ದ ಘಟನೆ ಚೆನ್ನೈನಲ್ಲಿ ನಡೆದಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋ ವೈರಲ್ ಆಗಿದೆ.

ತಮಿಳುನಾಡಿನ ಚೆನ್ನೈ ಪಚ್ಚೆಯಪ್ಪ ಕಾಲೇಜು ವಿದ್ಯಾರ್ಥಿಗಳು ಬಸ್ ಡೇ ಆಚರಣೆ ವೇಳೆ ನಗರದ ರಸ್ತೆಗಳಲ್ಲಿ ಮೆರವಣಿಗೆ ಮಾಡುತ್ತಿದ್ದರು. ಈ ವೇಳೆ ಬಸ್ ಚಾಲಕ ದಿಢೀರ್ ಬ್ರೇಕ್ ಹಾಕಿದ ಪರಿಣಾಮ ಟಾಪ್ ಮೇಲಿದ್ದ ವಿದ್ಯಾರ್ಥಿಗಳು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ.

ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು, ವಿಡಿಯೋದಲ್ಲಿ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ಬಸ್ ಟಾಪ್ ಏರಿ ಕೆಲ ವಿದ್ಯಾರ್ಥಿಗಳು ಕಾಲೇಜಿನ ಸ್ಲೋಗನ್, ಬಾವುಟ ಹಿಡಿದು ಬಸ್ ಮೇಲೆ ಕುಣಿಯುತ್ತಿದ್ದರು. ಈ ವೇಳೆ ಬಸ್ ಮುಂದೆ ಇದ್ದ ಬೈಕ್ ಸವಾರ ಬ್ರೇಕ್ ಹಾಕಿದ್ದು, ಬಸ್ ಚಾಲಕ ಕೂಡ ಬ್ರೇಕ್ ಹಾಕಿದ ಪರಿಣಾಮ ವಿದ್ಯಾರ್ಥಿಗಳು ಬಿದ್ದು ಗಾಯಗೊಂಡಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions