ಹುಣಸೆ ಹಣ್ಣನ್ನು ಹೀಗೂ ಬಳಕೆ ಮಾಡಬಹುದು…


Wednesday, September 26th, 2018 1:56 pm

ಸ್ಪೆಷಲ್ ಡೆಸ್ಕ್ : ಹುಣಸೆ ಹಣ್ಣನ್ನು ಸಾಮಾನ್ಯವಾಗಿ ಅಡುಗೆ ಮಾಡಲು ಬಳಕೆ ಮಾಡಲಾಗುತ್ತದೆ. ಇದರಿಂದ ಸಾರು , ಸಾಂಬಾರಿನ ರುಚಿ ಹೆಚ್ಚುತ್ತದೆ. ಜೊತೆಗೆ ಇದೆ ಹಾನ್ಸೇ ಹಣ್ಣನ್ನು ಸೌನ್ದರ್ಯ ಉತ್ಪನ್ನವಾಗಿ ಸಹ ಬಳಕೆ ಮಾಡಲಾಗುತ್ತದೆ. ಶಾಕ್ ಆಗಬೇಡಿ. ಇದು ನಿಜ. ಹುಣಸೆ ಹಣ್ಣನ್ನು ಅಂದ ಹೆಚ್ಚಿಸಲು ಹೇಗೆ ಬಳಕೆ ಮಾಡಬಹುದು ತಿಳಿಯಿರಿ…

ಕಲ್ಲು ಉಪ್ಪು, ಯೋಗರ್ಟ್‌ ಮತ್ತು ಹುಣಸೆಹಣ್ಣಿನ ತಿರುಳು ಒಟ್ಟಿಗೆ ಸೇರಿಸಿ ಮುಖಕ್ಕೆ ಮಸಾಜ್‌ ಮಾಡಿ ತೊಳೆದರೆ ನಿಮ್ಮ ಮುಖ ಫ್ರೆಶ್‌, ಕ್ಲೀನ್‌ ಮತ್ತು ಸ್ಮೂತ್‌ ಆಗುತ್ತದೆ.
ಹುಣಸೆ ಹಣ್ಣಿನ ತಿರುಳನ್ನು ನೀರಿನಲ್ಲಿ ನೆನೆಸಿ ಅದಕ್ಕೆ 1/2 ಚಮಚ ಅರಿಶಿನ ಪುಡಿ ಹಾಕಿ ಮುಖಕ್ಕೆ ಹಚ್ಚಿ. 15 ನಿಮಿಷದ ಬಳಿಕ ತೊಳೆದರೆ ಫೇರ್ ಸ್ಕಿನ್ ನಿಮ್ಮದಾಗುತ್ತದೆ.
ಅರ್ಧ ಚಮಚ ನಿಂಬೆ ರಸ ಮತ್ತು 1/2 ಚಮಚ ಜೇನನ್ನು 1 ಚಮಚ ಹುಣಸೆಹಣ್ಣಿನ ಜ್ಯೂಸ್‌ಗೆ ಸೇರಿಸಿ. ಇದನ್ನು ಮುಖಕ್ಕೆ ಹಚ್ಚಿ 15 ನಿಮಿಷ ಹಾಗೇ ಬಿಡಿ. ನಂತರ ಉಗುರು ಬಿಸಿ ನೀರಿನಿಂದ ವಾಶ್‌ ಮಾಡಿ. ಇದು ನ್ಯಾಚುರಲ್ ಬ್ಲೀಚ್ ನಂತೆ ಕೆಲಸ ಮಾಡುತ್ತದೆ.
1 ಚಮಚ ಜೇನು, 1 ಚಮಚ ರೋಸ್‌ ವಾಟರ್‌ ಮತ್ತು 1 ಚಮಚ ಹುಣಸೆ ರಸವನ್ನು ಸೇರಿಸಿ ಕುತ್ತಿಗೆಯ ಸುತ್ತ ಹಚ್ಚಿ 15 ನಿಮಿಷದ ಬಳಿಕ ತೊಳೆಯಿರಿ. ಇದನ್ನು ವಾರದಲ್ಲಿ 3 ರಿಂದ 5 ಬಾರಿ ಮಾಡುತ್ತಾ ಬಂದರೆ ಕುತ್ತಿಗೆಯ ಸುತ್ತಲಿನ ಡಾರ್ಕ್‌ ಸರ್ಕಲ್‌ ನಿವಾರಣೆಯಾಗುತ್ತದೆ.
ಹುಣಸೆಹಣ್ಣನ್ನು ನೀರಿನಲ್ಲಿ ನೆನೆಸಿ ನಂತರ ಅದನ್ನು ಸೋಸಿ ಆ ನೀರನ್ನು ಕೂದಲಿನ ಬುಡಕ್ಕೆ ಹಚ್ಚಿ. ನಂತರ 20 ನಿಮಿಷ ಹಾಗೇ ಬಿಟ್ಟು ಬಳಿಕ ವಾಷ್ ಮಾಡಿ. ವಾರದಲ್ಲಿ ಒಂದು ಬಾರಿ ಇದನ್ನು ಮಾಡುತ್ತಾ ಬಂದರೆ ಕೂದಲು ಉದುರುವುದು ಕಡಿಮೆಯಾಗುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions