ಸೊಂಟದ ಕೊಬ್ಬು ಕರಗಿಸಲು ಈ ಯೋಗಸನಾ ಮಾಡಿ ನೋಡಿ


Tuesday, June 19th, 2018 10:47 am


ಮಾಡುವ ವಿಧಾನ: ಎರಡೂ ಕಾಲಿನ ಮೇಲೆ ಸರಿಯಾಗಿ ಸಮನಾಗಿ ನಿಂತುಕೊಳ್ಳುವುದು ಸಹ ಒಂದು ಕಲೆ. ಈ ಸರಳವಾದ ಆಸನವು ಎಲ್ಲಾ ನಿಂತುಕೊಂಡು ಮಾಡುವ ಆಸನಗಳ ಅಭ್ಯಾಸಕ್ಕೆ ಬುನಾದಿ. ಸಾಮಾನ್ಯವಾಗಿ ನಾವು ಸರಿಯಾಗಿ ನಿಲ್ಲಬೇಕಾದ ಕಡೆಗೆ ಗಮನ ಹರಿಸದೆ ನಮ್ಮ ಇಡೀ ಶರೀರದ ಭಾರವನ್ನು ಒಂದೇ ಕಾಲಿಗೆ ವಹಿಸಿಯೋ ,ಮಂಡಿಯನ್ನು ಬಗ್ಗಿಸಿಯೋ ಅಥವಾ ಪಾದದ ಹೊಭಾಗಕ್ಕೆ ಭಾರ ವಹಿಸಿಯೋ,ಒಲ್ಲವೇ ಒಳಭಾಗಕ್ಕೆ ಭಾರ ಭಾರವಹಿಸಿಯೋ ಅಥವಾ ಹೊಟ್ಟೆಯನ್ನು ಮುಂದಕ್ಕೆ ತಳ್ಳಿ ನಿಂತುಕೊಳ್ಳುವ ಅಭ್ಯಾಸವಿರುತ್ತದೆ.ಈ ನ್ಯೂನತೆಯನ್ನು ಸರಿಪಡಿಸಿಕೊಳ್ಳಲು ತಾಡಾಸನವನ್ನು ಅಭ್ಯಾಸ ಮಾಡಬೇಕು.

ಅಭ್ಯಾಸ ಕ್ರಮ: 1 .ಸಮತಟ್ಟಾದ ನೆಲದ ಮೇಲೆ ಪಾದಗಳನ್ನು ಜೋಡಿಸಿ ನಿಂತುಕೊಳ್ಳಬೇಕು,ಕಾಲಿನ ಮೊದಲನೆಯ ಬೆರಳು ಮತ್ತು ಹಿಮ್ಮಡಿಯ ಒಳಭಾಗವು ಒಂದಕ್ಕೊಂದು ತಗುಲುತ್ತಿರಬೇಕು.ಶರೀರದ ಭಾರವು ಹಿಮ್ಮಡಿಯ ಮೇಲಾಗಲಿ ಕಾಲು ಬೇರಳಿನ ಮೇಲಾಗಲಿ ಬರದೆ ಪಾದದ ಮಧ್ಯಭಾಗವಾದ ಕಮಾನಿನ ಮೇಲೆ ಬರುವ ಹಾಗೆ ನಿಲ್ಲಬೇಕು.ಪಾದದ ಒಳಗಿಣ್ಣು(ಹರಡು=ಪಾದದ ಗಂಟು) ಸಹ ತಗುಲುತ್ತಿರಲಿ.

2.ಕಾಲು ಬೆರಳುಗಳನ್ನು ಬುಗಿಯಾಗಿಡದೇ ಅದರ ಬುಡವನ್ನು ಮುಂದಕ್ಕೆ ಚಾಚುತ್ತಾ ಬೆರಳುಗಳನ್ನು ಸಡಿಲಗೋಳಿಸಬೇಕು (ಎಲ್ಲಾ ನಿಂತುಕೊಂಡು ಮಾಡುವ ಅಸನಗಳಲ್ಲಿ ಕಾಲಿನ ಬೆರಳುಗಳನ್ನು ಈ ಸ್ಥಿತಿಯಲ್ಲಿ ಇಟ್ಟಿರಬೇಕು).

3.ಮೊಣಕಾಲನ್ನು ಒಳಗೆ ತಿರುಗಿಸುತ್ತಾ ಕಾಲಿನಮೀನಖಂಡವನ್ನು ಹೊರಕ್ಕೆ ತಿರುಗಿಸಬೇಕು.ಅಂದರೆ ಮೊಣಕಾಲನ್ನು ಪರಸ್ಪರ ಸಮಾನಂತರವಾಗಿ ಮತ್ತು ತೊಡೆಯ ಮೂಳೆಗೆ ಸಮರೇಖೆಯಲ್ಲಿಟ್ಟಿರಬೇಕು .(ಈಗ ಎರಡು ಪಾದದ ಒಳಗಿಣ್ಣು ಹಾಗೂ ಹೊರಗಿಣ್ಣು ಒಂದೇ ಎತ್ತರದಲ್ಲಿರುತ್ತದೆ).

4. ಮಂಡಿಯ ಚಿಪ್ಪಿನ ಕೆಳಭಾಗ ಮತ್ತು ಮೇಲ್ಬಾಗವನ್ನು ಸಮವಾಗಿ ಮೇಲಕ್ಕೆತ್ತಿ ಮಂಡಿಯ ಮಧ್ಯಭಾಗವನ್ನು ಹಿಂದಕ್ಕೆ ತಳ್ಳಿ ಮಂಡಿಯ ಹಿಂಬಾಗವನ್ನು ಮೇಲಕ್ಕೆ ಎತ್ತಬೇಕು ಮಂಡಿಗಳೇರಡು ಪರಸ್ಪರ ಕೂಡುವಂತಿದ್ದರೆ ಪಾದಗಳನ್ನು 6 ಅಂಗುಲ ಸಮವಾಗಿ ದೂರವಿರಿಸಬೇಕು.

5.ನಿತಂಬವನ್ನು ಸ್ವಲ್ಪ ಮುಂದಕ್ಕೆ ತಳ್ಳಿ ಪೃಷ್ಠವನ್ನು ಬಿಗಿಗೋಳಿಸಬೇಕು ಹಾಗೂ ಗುದದ್ವಾರವನ್ನು ಮೇಲಕ್ಕೆತ್ತಬೇಕು.

6.ಮೇರು ದಂಡವನ್ನು (ಬೆನ್ನುಹುರಿ) ನೇರವಾಗಿಡಲು ಕಿಬ್ಬೊಟ್ಟೆಯನ್ನು ಒಳಗೆ ಸೆಳೆದುಕೊಳ್ಳುವುದರಿಂದ ಸೊಂಟವು ಮೇಲಕ್ಕೆ ಚಾಚುತ್ತದೆ ಹಾಗೂ ಎದೆಯು ವಿಶಾಲವಾಗುತ್ತದೆ.

7.ಕಂಕುಳಿನ ಹತ್ತಿರವಿರುವ ಪಕ್ಕೆಯನ್ನು ಮೇಲಕ್ಕೆತ್ತಿ ಮುಂದಕ್ಕೆ ಚಾಚುತ್ತಿರುವುದರಿಂದ ಭುಜಗಳು ವಿಶಾಲವಾಗುತ್ತವೆ.ಭುಜಗಳಿಂದ ಕೀಲುಗಳನ್ನು ಚಾಚಿ ಮುಂಗೈಯನ್ನು ಕೆಳಗೆ ಚಾಚಬೇಕು.

8. ಹಸ್ತವನ್ನು ತೊಡೆಯ ಕಡೆಗೆ ನೇರವಾಗಿರಿಸಬೇಕು ಮತ್ತು ಕೈ ಬೆರಳುಗಳನ್ನು ಕೆಳಗೆ ಚಾಚಬೇಕು.

9.ಈಗ ನಾಭಿ, ಎದೆಯ ಮಧ್ಯಬಾಗ ಗಂಟಲು,ಗದ್ದ,ಮೂಗು ಹಾಗೂ ಹಣೆಯ ಮಧ್ಯಬಾಗ ಒಂದೇ ಸರಳ ರೇಖೆಯಲ್ಲಿರುತ್ತವೆ.

10.ನಾಲಗೆಯನ್ನು ಕೆಳಗೆ ತೆಗೆದುಕೊಳ್ಳಬೇಕು.ಇದು ತಾಡಾಸನ ಅಚಿತಿಮ ಸ್ಥಿತಿ ಈ ಸ್ಥಿತಿಯಲ್ಲಿ 20-30 ಸೆಕೆಂಡ್ ಸಾಮಾನ್ಯವಾದ ಉಸಿರಾಟದಿಂದಿರಬೇಕು.

.ಪರಿಣಾಮಗಳು:ನಿಂತುಕೊಳ್ಳುವುದರಿಂದ ಬರುವ ಎಲ್ಲಾ ನ್ಯೂನತೆಗಳು ಮೇರುದಂಡದ ಮೇಲೆ ಪ್ರಭಾವವನ್ನು ಬೀರುತ್ತದೆ.ತನ್ಮೂಲಕ ಮನಸ್ಸಿನ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ.ಅದ್ದರಿಂದ ಚುರುಕಾದ ಶರೀರ ,ಚುರುಕಾದ ಮೆದುಳು ಮತ್ತು ಚುರುಕಾದ ಮನಸ್ಸನ್ನು ಪಡೆದುಕೊಳ್ಳಬಹುದು ತಾಡಾಸನ ಅಭ್ಯಾಸವು ಬಹಳ ಉಪಯುಕ್ತ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions