-->

`ಸೈರಾ ನರಸಿಂಹ ರೆಡ್ಡಿ’ ಚಿತ್ರತಂಡಕ್ಕೆ ಮತ್ತೊಂದು ಶಾಕ್ : ಬಿಸಿಲಿನ ತಾಪಕ್ಕೆ ಸಹ ನಟ ಸಾವು!


Friday, May 17th, 2019 12:47 pm

ನ್ಯೂಸ್ ಡೆಸ್ಕ್ : ಮೆಗಾ ಸ್ಟಾರ್ ಚಿರಂಜೀವಿ ನಟನೆಯ ಬಹುನಿರೀಕ್ಷಿತ ಸೈರಾ ನರಸಿಂಹ ರೆಡ್ಡಿ ಸಿನಿಮಾ ತಂಡಕ್ಕೆ ಮತ್ತೊಂದು ಶಾಕ್ ಆಗಿದ್ದು, ಚಿತ್ರದ ಸಹ ನಟನೊಬ್ಬ ಬಿಸಿಲಿನ ತಾಪದಿಂದ ಸಾವನ್ನಪ್ಪಿದ್ದಾರೆ.

ಚಿತ್ರದಲ್ಲಿ ಅಭಿನಯಿಸಲು ರಷ್ಯಾದಿಂದ ಬಂದಿದ್ದ 37 ವರ್ಷದ ಅಲೆಗ್ಸಾಂಡರ್ ಎಂಬುವರು ತೀವ್ರ ಬಿಸಿಲಿನ ತಾಪದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ವರದಿಗಳ ಪ್ರಕಾರ 2 ದಿನಗಳ ಹಿಂದೆ ಹೈದರಾಬಾದ್ ನ ಗಚ್ಚಿ ಬೌಲಿಯ ಡಿಎಲ್ ಎಫ್ ಬಿಲ್ಡಿಂಗ್ ಬಳಿ ಅಲೆಕ್ಸಾಂಡರ್ ಮೃತದೇಹ ಪತ್ತೆಯಾಗಿದೆ.

ಪೊಲೀಸರು ಅಲೆಕ್ಸಾಂಡರ್ ಬಳಿ ಇದ್ದ ಕ್ಯಾಮೆರಾ ಪರಿಶೀಲಿಸಿದಾಗ ಸೈರಾ ಚಿತ್ರದ ಫೋಟೋಗಳು ಕಂಡು ಬಂದಿವೆ. ಚಿತ್ರತಂಡವನ್ನು ಸಂಪರ್ಕಿಸಿದಾಗ ಅಲೆಕ್ಸಾಂಡರ್ ಬ್ರಿಟಿಷ್ ವ್ಯಕ್ತಿಯಾಗಿ ಚಿತ್ರದಲ್ಲಿ ನಟಿಸಲು ಬಂದಿದ್ದ ಎಂದು ತಿಳಿದು ಬಂದಿದೆ.

ಸ್ವತಂತ್ರ್ಯ ಹೋರಾಟಗಾರ ಉಯ್ಯಾಲವಾಡ ನರಸಿಂಹ ರೆಡ್ಡಿ ಜೀವನ ಚರಿತ್ರೆಯನ್ನು ಚಿತ್ರದಲ್ಲಿ ತೋರಿಸಲಾಗಿದೆ. ಸುರೇಂದ್ರ ರೆಡ್ಡಿ ನಿರ್ದೇಶಿಸುತ್ತಿರುವ ಸೈರಾ ನರಸಿಂಹ ರೆಡ್ಡಿ ಸಿನಿಮಾವನ್ನು ರಾಮ್ ಚರಣ್ ತೇಜ್ ನಿರ್ಮಿಸುತ್ತಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions