ಸುಭಾಷಿತ :

Sunday, January 26 , 2020 4:18 AM

ಭಾರತವನ್ನು ಶ್ರೀಮಂತಗೊಳಿಸಿದ್ದು ಮೊಘಲರು : ಸ್ವರಾ ಭಾಸ್ಕರ್ ಟ್ವೀಟ್ ಗೆ ನೆಟ್ಟಿಗರ ಆಕ್ರೋಶ


Monday, July 15th, 2019 11:20 am

ನವದೆಹಲಿ:ಪ್ರತಿ ಬಾರಿ ಏನಾದರೊಂದು ಹೇಳಿ ವಿವಾದಕ್ಕೆ ಗುರಿಯಾಗುತ್ತಿದ್ದ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಇದೀಗ ಮತ್ತೊಮ್ಮೆ ನೆಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಈ ಬಾರಿ ಬಿಜೆಪಿ ವಿರುದ್ಧ ಹೇಳಿ ವಿವಾದ ಸೃಷ್ಟಿಸಿಲ್ಲ ಬದಲಾಗಿ ಮೊಘಲರು ಭಾರತವನ್ನು ಶ್ರೀಮಂತವಾಗಿಸಿದ್ದಾರೆ ಎಂದು ಸ್ವರಾ ಭಾಸ್ಕರ್ ಟ್ವೀಟ್ ಮಾಡಿದ್ದು ಇದಕ್ಕೆ ಕೆರಳಿರುವ ನೆಟ್ಟಿಗರು ನಟಿ ವಿರುದ್ಧ ಟೀಕೆಗಳನ್ನು ಮಾಡುತ್ತಿದ್ದಾರೆ.

ಕೆಲ ಟ್ವೀಟರಿಗರು ಈಕೆ ಯಾವಾಗಲೂ ಎಲ್ಲರನ್ನು ತನ್ನತ್ತ ಸೆಳೆಯುವಲ್ಲಿಯೇ ಬ್ಯುಸಿಯಾಗಿರುತ್ತಾಳೆ, ಅದಕ್ಕಾಗಿ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಾರೆ ಎಂದರೆ ಇನ್ನು ಕೆಲವರು ಒಸಾಮಾ ಬಿನ್ ಲಾಡೆನ್ ಜಗತ್ತನ್ನು ಶಾಂತಿಯುತಗೊಳಿಸಿದಂತೆಯೇ? ಎಂದು ಪ್ರಶ್ನಸಿದರೆ ಮತ್ತೆ ಕೆಲವರು ಇತಿಹಾಸವನ್ನು ತಿಳಿಯದೆ ಸುಮ್ಮನೆ ಮಾತನಾಡಬೇಡಿ ಎಂದು ಸಲಹೆ ನೀಡಿದ್ದಾರೆ. ಇನ್ನು ಕೆಲವರು ಇತಿಹಾಸವನ್ನೇ ಅವರಿಗೆ ವಿವರಿಸಿ ಟ್ವೀಟ್ ಮಾಡಿದ್ದಾರೆ.

 

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions