ಕೇರಳ ಪ್ರವಾಹ ಪೀಡಿತರಿಗೆ 5 ಕೋಟಿ ರೂ ನೀಡಿದ ಸನ್ನಿ ಲಿಯೋನ್


Monday, August 20th, 2018 7:14 am

ಮುಂಬೈ:ಕೇವಲ ತನ್ನ ಚಿತ್ರಗಳಿಂದ ಮಾತ್ರವಲ್ಲ, ಬದಲಾಗಿ ತನ್ನ ಉತ್ತಮ ಕಾರ್ಯಗಳಿಂದ ಸದಾ ಸುದ್ದಿಯಲ್ಲಿರುವ ಬಾಲಿವುಡ್​ ತಾರೆ ಸನ್ನಿಲಿಯೋನ್​ ಕೇರಳದಲ್ಲಿ ಉಂಟಾಗಿರುವ ಸಂಕಷ್ಟಕ್ಕೆ ಸ್ಪಂದಿಸಿದ್ದು, ಪರಿಹಾರ ಕಾರ್ಯಕ್ಕಾಗಿ 5 ಕೋಟಿ ರೂ. ನೀಡಿದ್ದಾರೆ.

ಕೇರಳಿಗರ ಸಂಕಷ್ಟಕ್ಕೆ ಈಗಾಗಲೇ ಹಲವು ಚಿತ್ರ ತಾರೆಯರು, ಕ್ರೀಡಾ ತಾರೆಯರು ತಮ್ಮದೇ ಆದ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಈಗ ಸನ್ನಿ ಲಿಯೋನ್​ ಮುಖ್ಯಮಂತ್ರಿ ಪರಿಹಾರ ನಿಧಿಗೆ 5 ಕೋಟಿ ರೂಪಾಯಿಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಭೀಕರ ಮಳೆಗೆ ಕೇರಳ ಮುಳುಗಿದ್ದು ಕೇರಳಿಗರ ಬದುಕು ನರಕಸದೃಶ್ಯದಂತಾಗಿದೆ. ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 370 ಕ್ಕೆ ಏರಿದೆ

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions