ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ ಆಹಾರ ಪದಾರ್ಥಗಳು


Wednesday, March 13th, 2019 12:24 pm

ಸ್ಪೆಷಲ್ ಡೆಸ್ಕ್ : ಈ ಬಾರಿ ಬಿಸಿಲಿನ ಬೇಗೆ ತುಂಬಾ ಹೆಚ್ಚಾಗಿದೆ. ಮನೆಯೊಳಗೆ ಕುಂತರೂ ಬೆವರಿಳಿಯುತ್ತದೆ. ಈ ಬೆವರು, ಬಳಲಿಕೆಯಿಂದ ಮುಕ್ತಿ ಪಡೆಯಲು ಕೆಲವೊಂದು ಆಹಾರ ಪದಾರ್ಥ, ಹಣ್ಣು -ಹಂಪಲುಗಳನ್ನು ನಿಯಮಿತವಾಗಿ ಸೇವಿಸಬೇಕು. ಅವು ಯಾವುವು ನೋಡೋಣಾ….

ಎಳನೀರು : ಎಳನೀರಿನಲ್ಲಿ ವಿಟಮಿನ್ಗಳು ಹಾಗೂ ಪೋಷಕಾಂಶಗಳಿವೆ. ಇದನ್ನು ನಿಯಮಿತವಾಗಿ ಸೇವನೆ ಮಾಡಿದರೆ ದೇಹಕ್ಕೆ ಶಕ್ತಿ ಸಿಗುತ್ತದೆ. ದೇಹದ ಉಷ್ಣಾಂಶ ಕಡಿಮೆಯಾಗಿ ಸಮತೋಲನ ಕಾಯ್ದುಕೊಳ್ಳಲು ಸಹಾಯಕವಾಗಿದೆ.

ಪುದೀನಾ ಮತ್ತು ಸೌತೆಕಾಯಿ ಜ್ಯೂಸ್ : ಪುದೀನಾ ಎಲೆ ಮತ್ತು ಸೌತೆಕಾಯಿಯನ್ನು ಸ್ಲೈಸ್ ಮಾಡಿ ಅದನ್ನು ಒಂದು ಪಾತ್ರೆ ನೀರಿಗೆ ಹಾಕಿ ಹಾಗೆ ಒಂದೆರಡು ಗಂಟೆ ಬಿಡಿ. ನಂತರ ಇದನ್ನು ಸೇವಿಸಿ, ಇದರಲ್ಲಿ ವಿಟಮಿನ್ ಸಿ, ಎ ಹೆಚ್ಚಿನ ಪ್ರಮಾಣದಲ್ಲಿದ್ದು ಉಷ್ಣತೆ ಹೆಚ್ಚುವುದನ್ನು ತಡೆಯುತ್ತದೆ. ದೇಹಕ್ಕೆ ಶಕ್ತಿ ನೀಡುತ್ತದೆ.

ಮಜ್ಜಿಗೆ : ಮಜ್ಜಿಗೆ ಸಹ ದೇಹದ ಉಷ್ಣತೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಣ್ಣಿನ ಮಡಕೆಯಲ್ಲಿ ಮಜ್ಜಿಗೆ ಮಾಡಿ ಅದಕ್ಕೆ ಕೊತ್ತಬರಿಸೊಪ್ಪು, ಶುಂಠಿ, ಹಸಿಮೆಣಸು ಜಜ್ಜಿ ಹಾಕಿ ಸೇವನೆ ಮಾಡಿದರೆ ದೇಹ ತಂಪಾಗುತ್ತದೆ.

ನಿಂಬೆ ಜ್ಯೂಸ್ : ನಿಂಬೆ ಜ್ಯೂಸ್ ದೇಹಕ್ಕೆ ತಂಪು ನೀಡುತ್ತದೆ ಜೊತೆಗೆ ಬಳಲಿಕೆ ದೂರ ಮಾಡಿ ಮತ್ತಷ್ಟು ಚೇತನ ನೀಡಲು ಸಹಾಯ ಮಾಡುತ್ತದೆ.

ಕಲ್ಲಂಗಡಿ ಹಣ್ಣು, ಕಿತ್ತಳೆ ಹಣ್ಣು, ಮೂಸಂಬಿ : ಈ ಹಣ್ಣುಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುತ್ತದೆ ಜೊತೆಗೆ ವಿಟಮಿನ್ ಸಿ ಆಗರವಾಗಿದೆ. ಇವುಗಳನ್ನು ಹಾಗೆ ಸೇವನೆ ಮಾಡಬಹುದು, ಇಲ್ಲ ಜ್ಯೂಸ್ ಮಾಡಿ ಸೇವನೆ ಮಾಡಬಹುದು. ಎರಡು ವಿಧಾನವೂ ದೇಹಕ್ಕೆ ತಂಪು ನೀಡುತ್ತದೆ.

ನೆಲ್ಲಿಕಾಯಿ ಜ್ಯೂಸ್ : ಇದರಲ್ಲಿ ರೋಗ ನಿರೋಧಕ ಶಕ್ತಿ ಇದೆ ಜತೆಗೆ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ನೆಲ್ಲಿಕಾಯಿ ರಸ ಅಥವಾ ಜ್ಯೂಸ್ ಮಾಡಿ ಸೇವನೆ ಮಾಡಿದರೆ ಯಾವುದೇ ರೋಗಗಳು ಸುಲಭವಾಗಿ ಬಾಧಿಸುವುದಿಲ್ಲ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions