-->

ಸಕ್ಕರೆ ಆರೋಗ್ಯಕ್ಕೆ ಕೆಟ್ಟದಾದರೂ ಸೌಂದರ್ಯಕ್ಕೆ ಬೆಸ್ಟ್


Saturday, April 13th, 2019 10:00 am

ಸ್ಪೆಷಲ್ ಡೆಸ್ಕ್ : ಸಕ್ಕರೆ ಹೆಚ್ಚಾಗಿ ಸೇವನೆ ಮಾಡಿದರೆ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಎನ್ನಲಾಗುತ್ತದೆ. ಇದೆ ಸಕ್ಕರೆಯನ್ನು ಸೌಂದರ್ಯ ಹೆಚ್ಚಿಸಲು ಬಳಸಿದರೆ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ. ಒಂದಲ್ಲ ಎರಡಲ್ಲ ಸಕ್ಕರೆಯಿಂದ ನೂರಾರು ಪ್ರಯೋಜನಗಳಿವೆ… ಅವು ಯಾವುವು ಒಮ್ಮೆ ನೋಡೋಣ…

ಸಕ್ಕರೆ ಮತ್ತು ನಿಂಬೆರಸ ಬೆರಸಿ ಮುಖಕ್ಕೆ ಹಚ್ಚಿದರೆ ಮೊಡವೆಗಳು ಕಡಿಮೆಯಾಗುತ್ತದೆ.
ಒಣ ತ್ವಚೆಯವರು ಸಕ್ಕರೆ ಮತ್ತು ಆಲೀವ್ ಎಣ್ಣೆ ಮತ್ತು ಜೇನು ಮಿಶ್ರಣ ಮಾಡಿ, ಇದನ್ನು ಮುಖಕ್ಕೆ ಹಚ್ಚಿ ವೃತ್ತಾಕಾರವಾಗಿ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ಒಣ ತ್ವಚೆಯ ಸಮಸ್ಯೆ ನಿವಾರಿಸಬಹುದು.
ಎರಡು ಚಮಚ ಕಾಫಿ ಪುಡಿಗೆ ಒಂದು ಚಮಚ ಸಕ್ಕರೆ ಹಾಕಿ, ಸ್ವಲ್ಪ ನೀರು ಹಾಕಿ ಮಿಶ್ರಣ ಮಾಡಿ. ಮುಖಕ್ಕೆ ಸ್ಕ್ರಬ್ ಮಾಡಿ.ಇದರಿಂದ ಡೆಡ್ ಸ್ಕಿನ್ ನಿವಾರಣೆಯಾಗುತ್ತದೆ.
ತ್ವಚೆ ಕಪ್ಪಾಗಿದ್ದರೆ ಅದಕ್ಕೆ ಈ ಮಿಶ್ರಣವನ್ನು ಬಳಸಿ. ಸಕ್ಕರೆ, ಜೇನು ಹಾಗೂ ಮೊಸರು ಮಿಕ್ಸ್ ಮಾಡಿದ ಸ್ಕ್ರಬ್ ಬಳಸಿದರೆ ತ್ವಚೆ ಕಪ್ಪಾಗುವಿಕೆಯನ್ನು ತಡೆಯಬಹುದು.
ಟೇಬಲ್ ಚಮಚ ಸಕ್ಕರೆ ಮತ್ತು 2 ಟೇಬಲ್ ಚಮಚ ಬಾದಾಮಿ ಎಣ್ಣೆಯನ್ನು ಮಿಕ್ಸ್ ಮಾಡಿ ಸ್ಕ್ರಬ್ ಮಾಡಿದರೆ ಸುಂದರ ತ್ವಚೆ ನಿಮ್ಮದಾಗುತ್ತದೆ.
ಟೇಬಲ್ ಚಮಚ ಸಕ್ಕರೆ ಮತ್ತು 2 ಟೇಬಲ್ ಚಮಚ ಬಾದಾಮಿ ಎಣ್ಣೆಯನ್ನು ಮಿಶ್ರಗೊಳಿಸಿ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions