ಸುಭಾಷಿತ :

Thursday, January 23 , 2020 5:59 PM

‘ಮೈತ್ರಿ’ ನಾಯಕರು ನನ್ನ ಮಾತು ಕೇಳಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ : ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ


Wednesday, July 17th, 2019 10:05 pm

ಕೋಲಾರ : ಮೈತ್ರಿ ಪಕ್ಷಗಳ ನಾಯಕರು ನನ್ನ ಮಾತು ಕೇಳಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು ಈ ಹಿಂದೆಯೇ ಬಿಜೆಪಿಯವರು ನನಗೆ 5 ಕೋಟಿ ನೀಡಲು ಬಂದಿದ್ದರು ಎಂದು ನಾಯಕರಿಗೆ ತಿಳಿಸಿದ್ದೆನು.  ಆಗಲೇ ಮೈತ್ರಿ ಪಕ್ಷಗಳ ನಾಯಕರು ನನ್ನ ಮಾತನ್ನು ಗಂಭೀರವಾಗಿ ಪರಿಗಣಿಸಿದ್ದರೆ, ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

ಒಂದು ಪಕ್ಷದ ಚಿಹ್ನೆಯಿಂದ ಗೆದ್ದು ಈ ರೀತಿ ನಡೆದುಕೊಳ್ಳಬಾರದು. ಅತೃಪ್ತ ಶಾಸಕರು ಬಂದು ಸರ್ಕಾರ ಉಳಿಸಬೇಕು. ಸಿಎಂ ಕುಮಾರಸ್ವಾಮಿ ನಡೆ ಬಗ್ಗೆ ಯಾರೂ ಕೂಡ ಪ್ರಶ್ನೆ ಮಾಡಬಾರದು. ಶಾಸಕರು ಮರಳಿ ಬರಬೇಕು. ಅತೃಪ್ತ ಶಾಸಕರು ವಾಪಸ್ ಬಂದು ಮೈತ್ರಿ ಸರ್ಕಾರವನ್ನು ಉಳಿಸಬೇಕು ಎಂದು ಮನವಿ ಮಾಡುತ್ತೇನೆ ಎಂದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions