ಸುಭಾಷಿತ :

Monday, September 23 , 2019 3:52 PM

ಮಳೆಗಾಲಕ್ಕೆ ಮುದ ನೀಡುವ ಆರೋಗ್ಯಕರ ಟೊಮೇಟೊ ಸೂಪ್


Thursday, June 13th, 2019 11:45 am

ಸ್ಪೆಷಲ್ ಡೆಸ್ಕ್ : ಮಳೆಗಾಲದಲ್ಲಿ ಅರೋಗ್ಯ ಉತ್ತಮವಾಗಿರುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಆರೋಗ್ಯಯುತ ಆಹಾರಗಳನ್ನೇ ಹೆಚ್ಚಾಗಿ ಸೇವನೆ ಮಾಡಬೇಕು. ಅಂತಹ ಆಹಾರಗಳಲ್ಲಿ ಪ್ರಮುಖವಾದುದು ಸೂಪ್. ಟೊಮೇಟೊ ಸೂಪ್ ಮಾಡಲು ಸುಲಭ, ಆರೋಗ್ಯಕ್ಕೂ ಉತ್ತಮ. ಮಳೆಗಾಲದ ಸಮಯದಲ್ಲಿ ಬಿಸಿ ಬಿಸಿ ಸೂಪ್ ಮಾಡಿ ಸೇವಿಸಿದರೆ ಆರೋಗ್ಯಕ್ಕೆ ಉತ್ತಮ.

ಬೇಕಾಗುವ ಸಾಮಗ್ರಿಗಳು : 10 ಟೊಮೆಟೊ, ಕೊತ್ತಂಬರಿ ಸೊಪ್ಪು 1, ಎಣ್ಣೆ 1 ಚಮಚ, ಶುಂಠಿ ಸಣ್ಣ ತುಂಡು 2 ಚಮಚ ಜೀರಿಗೆ, ಸಕ್ಕರೆ ರುಚಿಗೆ , 2 ಚಮಚ ಉಪ್ಪು, ಕರಿಮೆಣಸಿನ ಪುಡಿ ಆರು ಚಮಚ, 2 ಚಮಚ ಮುಸುಕಿನ ಜೋಳದ ಪುಡಿ, 1 ಹಸಿಮೆಣಸು,

ಮಾಡುವುದು ಹೇಗೆ..?
ಮೊದಲು ಬಾಣಲೆಯಲ್ಲಿ ಎಣ್ಣೆ ಹಾಕಿ ಅದರಲ್ಲಿ ಶುಂಠಿ, ಕೊತ್ತಂಬರಿ ಸೊಪ್ಪು ಮತ್ತು ಟೊಮೇಟೊ ಹಾಕಿ. ಟೊಮೇಟೊ ಚೆನ್ನಾಗಿ ಮೃದುವಾಗುವವರೆಗೆ ಬೇಯಿಸಿ.
ನಂತರ ಜೀರಿಗೆ ಹಾಗೂ ಬೇಯಿಸಿದ ಟೊಮೆಟೊವನ್ನು ಮಿಕ್ಸಿಗೆ ಹಾಕಿ ರುಬ್ಬಿ ಜರಡಿಗೆ ಹಾಕಿ ಸೋಸಿಕೊಳ್ಳಬೇಕು.
ಈ ಸೋಸಿದ ರಸಕ್ಕೆ ಸಕ್ಕರೆ, ಉಪ್ಪು, ಕಾಳು ಮೆಣಸಿನ ಪುಡಿ, ಜೋಳದ ಪುಡಿ, ಹಸಿಮೆಣಸು ಸಣ್ಣದಾಗಿ ಹೆಚ್ಚಿ ಹಾಕಿ 5 ನಿಮಿಷ ಚೆನ್ನಾಗಿ ಕುದಿಸಿ ಕೆಳಗಿಳಿಸಬೇಕು.
ಬೇಕೆನಿಸಿದರೆ ಬ್ರೆಡ್ ರೋಸ್ಟ್ ಮಾಡಿ ಹಾಕಿ ಸವಿಯಿರಿ.
ಕರಿಮೆಣಸಿನ ಪುಡಿ ಸ್ವಲ್ಪ ಹೆಚ್ಚಾಗಿಯೇ ಹಾಕಿ. ಇದರಿಂದ ಶೀತ, ಕೆಮ್ಮು ಮೊದಲಾದ ಸಮಸ್ಯೆಗಳು ದೂರವಾಗುತ್ತವೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Gadgets
State
Astrology
Cricket Score
Poll Questions