ಮಂಗಳೂರು: ಅಪರೂಪದ ಜಾತಿಗೆ ಸೇರಿದ ಹಾವು ರಕ್ಷಣೆ


Monday, October 29th, 2018 5:40 pm

ಮಂಗಳೂರು:  ಅಪರೂಪದ ಜಾತಿಗೆ ಸೇರಿದ ಹಾವೊಂದು ಮನೆಯಂಗಳದಲ್ಲಿ ಪತ್ತೆಯಾದ ಘಟನೆ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಲ್ಮಂಜದಲ್ಲಿ ನಡೆದಿದೆ

ಕಲ್ಮಂಜದ ರಮೇಶ್ ಎಂಬವರ ಮನೆಯ ಅಂಗಳದಲ್ಲಿ ಈ ವಿಭಿನ್ನ ಜಾತಿಗೆ ಸೇರಿದ ಹಾವೊಂದು ಪತ್ತೆಯಾಗಿದ್ದು, ಮೈಯ್ಯಲ್ಲಿ ಕಪ್ಪು-ಬಿಳಿ ಬಣ್ಣದ ಗೆರೆಗಳಿವೆ. ಸ್ಥಳೀಯರಿಗೂ ಇದು ಯಾವ ಜಾತಿಗೆ ಸೇರಿದ ಹಾವು ಅನ್ನೋದು ಗೊತ್ತಾಗಿಲ್ಲ. ಹೀಗಾಗಿ ರಮೇಶ್ ಅವರು ಸ್ಥಳೀಯ ಉರಗ ತಜ್ಞ ಲಿಂಗಪ್ಪರಿಗೆ ಮಾಹಿತಿ ನೀಡಿ ಹಾವನ್ನ ರಕ್ಷಣೆ ಮಾಡಿದ್ದಾರೆ. ಆದ್ರೆ ಅವ್ರಿಗೂ ಇದು ಯಾವ ಜಾತಿಗೆ ಸೇರಿದ ಹಾವೆಂದು ಗೊತ್ತಾಗಿಲ್ಲ. ಸದ್ಯ ಉರಗತಜ಼್ ಸ್ನೇಕ್ ಶ್ಯಾಮ್ ಮೂಲಕ ಹಾವನ್ನು ಮಂಗಳೂರಿನ ಪಿಲಿಕುಳ ಉರಗ ಸಂರಕ್ಷಣಾ ಕೇಂದ್ರಕ್ಕೆ ಸಾಗಿಸಲಾಗಿದೆ. ಕೆಲವರ ಪ್ರಕಾರ ಇದು ಕ್ಯಾಟ್ ಸ್ನೇಕ್ ಜಾತಿಗೆ ಸೇರಿದ ಹಾವು ಎನ್ನಲಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions