ಸುಭಾಷಿತ :

Sunday, January 26 , 2020 4:19 AM

‘ಸಿಂಗನ ಮೇಲೆ ತಾರಾ ಭರವಸೆ!


Thursday, July 18th, 2019 10:11 am

ಸಿನಿಮಾಡೆಸ್ಕ್: ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ದಶಕಗಳ ಹಿಂದೆಯೇ ಸದ್ದು ಮಾಡಿದ್ದವರು ನಟಿ ತಾರಾ. ಆ ನಂತರದಲ್ಲಿ ಪೋಷಕ ಪಾತ್ರಗಳ ಮೂಲಕ ಬಣ್ಣದ ಬದುಕಿನ ಮತ್ತೊಂದು ಇನ್ನಿಂಗ್ಸ್ ಆರಂಭಿಸಿರೋ ಅವರು ಈ ಕ್ಷಣಕ್ಕೂ ಭಿನ್ನಾತಿ ಭಿನ್ನವಾದ ಪಾತ್ರಗಳ ವಾರಸೂದಾರರಾಗಿ ಮುಂದುವರೆಯುತ್ತಿದ್ದಾರೆ. ಅದರಲ್ಲಿಯೂ ಚಿರಂಜೀವಿ ಸರ್ಜಾ ಅಭಿನಯದ ಸಿಂಗ ಚಿತ್ರದಲ್ಲಿ ತನಗೆ ಸಿಕ್ಕಿರೋ ಪಾತ್ರ ಮತ್ತು ಒಟ್ಟಾರೆ ಕಥಾ ಹಂದರದ ಬಗ್ಗೆ ತಾರಾ ಅವರಿಗೆ ತುಂಬು ಭರವಸೆ ಇದೆ.

ನಿರ್ದೇಶಕ ವಿಜಯ್ ಕಿರಣ್ ಅವರು ಕಥೆ ಸಿದ್ಧ ಪಡಿಸುವ ಹಂತದಲ್ಲಿಯೇ ಅದೊಂದು ಪಾತ್ರವನ್ನು ತಾರಾ ಅವರನ್ನು ಮನಸಲ್ಲಿಟ್ಟುಕೊಂಡೇ ಸೃಷ್ಟಿಸಿದ್ದರಂತೆ. ಎಲ್ಲ ಅಮ್ಮಂದಿರ ಪ್ರತಿನಿಧಿಯಂತಿರೋ ಆ ಪಾತ್ರಕ್ಕೆ ತಾರಾ ಮಾತ್ರವೇ ಸೂಟ್ ಆಗುತ್ತಾರೆಂದೂ ಅಂದುಕೊಂಡಿದ್ದರಂತೆ. ಬಳಿಕ ಕಥೆ ಹೇಳಿದಾಗ ಖುದ್ದು ತಾರಾ ಅವರೇ ಮೆಚ್ಚಿಕೊಂಡು ನಟಿಸಲು ಒಪ್ಪಿಕೊಂಡಿದ್ದರು. ಆ ನಂತರವಂತೂ ಚಿತ್ರೀಕರಣದ ಹಂತದಲ್ಲಿ ತಮ್ಮ ಪಾತ್ರದಾಚೆಗೂ ಚಿತ್ರತಂಡಕ್ಕೆ ಸ್ಫೂರ್ತಿ ತುಂಬಿದ ತಾರಮ್ಮನ ಬಗ್ಗೆ ಇಡೀ ತಂಡದಲ್ಲೊಂದು ಮೆಚ್ಚುಗೆಯಿದೆ.

ಸಿಂಗ ಚಿತ್ರದಲ್ಲಿ ಎಲ್ಲ ಪಾತ್ರಗಳೂ ವಿಭಿನ್ನವಾಗಿದೆ ಅಂತ ಆರಂಭ ಕಾಲದಿಂದಲೂ ಚಿತ್ರತಂಡ ಹೇಳಿಕೊಂಡಿದೆ. ಹಾಗಂತ ಇದೇನು ಮಾಮೂಲಿ ಸ್ಲೋಗನ್ ಅಲ್ಲ. ಅದರ ಸುಳಿವು ಟ್ರೈಲರ್ ಮೂಲಕವೇ ಸಿಕ್ಕಿದೆ. ಅದರಲ್ಲಿಯೂ ತಾರಾ ಅವರ ಪಾತ್ರವಂತೂ ಥೇಟರಿನಿಂದ ಹೊರ ಬಂದ ಮೇಲೂ ಪ್ರೇಕ್ಷಕರನ್ನು ಕಾಡುವಂತಿದೆಯಂತೆ. ತಾರಾ ಅವರ ಪಾತ್ರವೂ ಸೇರಿದಂತೆ ಎಲ್ಲ ವಿಶೇಷತೆಗಳೂ ಕೂಡಾ ಇದೇ ತಿಂಗಳ ಹತ್ತೊಂಬತ್ತರಂದು ಜಾಹೀರಾಗಲಿದೆ. ಹೀಗೆ ಹೊಸತನದಿಂದ ರೂಪುಗೊಂಡಿರೋ ಸಿಂಗನ ಮೇಲೆ ತಾರಾ ಅವರಿಗೆ ಅಚಲ ಭರವಸೆಯೂ ಇದೆಯಂತೆ!

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions