ಸುಭಾಷಿತ :

Thursday, January 23 , 2020 5:58 PM

ಚಿರಂಜೀವಿ ಸರ್ಜಾ ಜಾಹೀರು ಮಾಡಿದ ‘ಸಿಂಗ ಸೀಕ್ರೆಟ್!


Tuesday, July 16th, 2019 11:22 am

ಉದಯ್ ಮೆಹ್ತಾ ನಿರ್ಮಾಣ ಮಾಡಿರುವ ಸಿಂಗ ದಶ ದಿಕ್ಕುಗಳಿಂದಲೂ ಪ್ರೇಕ್ಷಕರನ್ನು ಆವರಿಸಿಕೊಂಡಿದೆ. ಮೈನವಿರೇಳಿಸೋ ಟ್ರೈಲರ್, ಹುಚ್ಚೆದ್ದು ಕುಣಿಸುತ್ತಲೇ ನವಿರಾಗಿ ಕಚಗುಳಿಯಿಡೋ ಹಾಡುಗಳ ಜೊತೆ ಜೊತೆಗೇ ಸಿಂಗ ಈಗ ಪ್ರೇಕ್ಷಕರ ಬಹು ನಿರೀಕ್ಷಿತ ಚಿತ್ರವಾಗಿಯೂ ಹೊರ ಹೊಮ್ಮಿದೆ. ಬಿಡುಗಡೆಯ ಹೊಸ್ತಿಲಲ್ಲಿಯೇ ಹೊತ್ತಿಕೊಂಡಿರೋ ನಿರೀಕ್ಷೆಯ ಜ್ವಾಲೆ, ಎಲ್ಲೆಂದರಲ್ಲಿ ಕೇಳಿ ಬರುತ್ತಿರೋ ಒಳ್ಳೆ ಮಾತುಗಳಿಂದ ಇಡೀ ಚಿತ್ರತಂಡ ಖುಷಿಗೊಂಡಿದೆ.

ವಿಜಯ್ ಕಿರಣ್ ನಿರ್ದೇಶನ ಮಾಡಿರೋ ಈ ಚಿತ್ರ ಪಕ್ಕಾ ಮಾಸ್ ಶೈಲಿಯ ಚಿತ್ರ ಅನ್ನೋದರಲ್ಲಿ ಸಂದೇಹವೇನಿಲ್ಲ. ಆದರೆ ನಿಜಕ್ಕೂ ಇದರ ಕಥೆ ಏನೆಂಬ ಕುತೂಹಲ ಮಾತ್ರ ಪ್ರತೀ ಪ್ರೇಕ್ಷಕರಲ್ಲಿಯೂ ಇದ್ದೇ ಇದೆ. ಆದರೆ ಕಥೆಯ ಬಗ್ಗೆ ಮಾತ್ರ ಸಣ್ಣ ಸುಳಿವುಗಳನ್ನು ಹೊರತು ಪಡಿಸಿ ಬೇರ‍್ಯಾವ ಮಾಹಿತಿಗಳೂ ಹೊರ ಬರದಂತೆ ಚಿತ್ರತಂಡ ಎಚ್ಚರ ವಹಿಸಿದೆ. ಇದೆಲ್ಲದರ ನಡುವೆಯೂ ಈ ಚಿತ್ರದ ನಾಯಕ ಚಿರಂಜೀವಿ ಸರ್ಜಾ ಸಿಂಗನ ಕುರಿತಾದ ಕೆಲ ಸೀಕ್ರೆಟ್‌ಗಳನ್ನು ಜಾಹೀರು ಮಾಡಿದ್ದಾರೆ!

ಆ ಪ್ರಕಾರವಾಗಿ ನೋಡ ಹೋದರೆ, ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಈವರೆಗೆ ಯಾವತ್ತೂ ಕಾಣಿಸಿಕೊಳ್ಳದಿರೋ ಗೆಟಪ್ಪಿನಲ್ಲಿ ನಟಿಸಿದ್ದಾರೆ. ಯಾವ ವರ್ಗದ ಪ್ರೇಕ್ಷಕರು ಎಂಥಾದ್ದೇ ನಿರೀಕ್ಷೆ ಹೊತ್ತು ಬಂದರೂ ಅದನ್ನು ತಣಿಸುವಂಥಾ ಮ್ಯಾಜಿಕ್ಕು ಈ ಕಥೆಯಲ್ಲಿಯೇ ಮಿಳಿತವಾಗಿದೆ. ಈ ಚಿತ್ರದ ತಾರಾಗಣವಂತೂ ತುಂಬಾನೇ ಭಿನ್ನವಾಗಿದೆ. ಸಾಮಾನ್ಯವಾಗಿ ಪ್ರತೀ ನಟ ನಟಿಯರಿಗೂ ಒಂದು ಇಮೇಜ್ ಇರುತ್ತೆ. ಅವರೊಂದು ಪಾತ್ರ ನಿರ್ವಹಿಸಿದರೆ ಅದು ಹೀಗೆಯೇ ಇದ್ದೀತೆಂಬ ಅಂದಾಜೂ ಸಿಕ್ಕು ಬಿಡುತ್ತದೆ. ಆದರೆ ಸಿಂಗನ ವಿಚಾರದಲ್ಲಿ ಅಂಥಾ ಲೆಕ್ಕಾಚಾರಗಳೆಲ್ಲವೂ ಅದಲು ಬದಲಾಗಲಿದೆ. ಅಷ್ಟಕ್ಕೂ ಈ ಚಿತ್ರದಲ್ಲಿ ಅಂಥಾ ವಿಶೇಷತೆ ಏನೇನಿದೆ ಅನ್ನೋದು ಇದೇ ತಿಂಗಳ ಹತ್ತೊಂಬತ್ತರಂದು ಗೊತ್ತಾಗಲಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions