ಸುಭಾಷಿತ :

Sunday, January 26 , 2020 4:16 AM

ಸಿಂಗ: ಗೆಟಪ್ಪು ಬದಲಾಯಿಸಿಕೊಳ್ಳಲು ಚಿರು ನಡೆಸಿದ್ದ ಸರ್ಕಸ್ಸು!


Thursday, July 18th, 2019 10:03 am

ಸಿನಿಮಾಡೆಸ್ಕ್: ಒಂದು ಸಿನಿಮಾವನ್ನು ಒಪ್ಪಿಕೊಂಡರೆಂದರೆ ತನ್ನ ಪಾತ್ರ ಬೇಡುವ ಪ್ರತಿಯೊಂದಕ್ಕೂ ಶ್ರದ್ಧೆಯಿಂದ ತಯಾರಾಗೋದು ಚಿರಂಜೀವಿ ಸರ್ಜಾರ ವ್ಯಕ್ತಿತ್ವ. ಸಿನಿಮಾ ತಂಡದ ಉತ್ಸಾಹವನ್ನು ಇಮ್ಮಡಿಗೊಳಿಸುತ್ತಲೇ ಸದಾ ಹೊಸಾ ಆವಿಷ್ಕಾರಗಳಿಗೆ ಪ್ರೋತ್ಸಾಹಿಸೋ ಚಿರು ಸಿಂಗ ಚಿತ್ರಕ್ಕಾಗಿ ಈ ಹಿಂದಿಗಿಂತಲೂ ಒಂದು ಪಟ್ಟು ಹೆಚ್ಚೇ ಶ್ರಮ ವಹಿಸಿದ್ದಾರೆ. ಇಷ್ಟೂ ವರ್ಷಗಳ ತಮ್ಮ ಸಿನಿಮಾ ಕೆರಿಯರ್‌ನಲ್ಲಿಯೇ ಸಿಂಗ ಒಂದು ಸ್ಪೆಷಲ್ ಚಿತ್ರ ಅಂದುಕೊಂಡಿರೋ ಚಿರಂಜೀವಿ ಸರ್ಜಾ ಇದಕ್ಕಾಗಿ ನಡೆಸಿದ ಸರ್ಕಸ್ಸುಗಳ ಕಥೆಯೇ ಮಜವಾಗಿದೆ.

ನಿರ್ದೇಶಕ ವಿಜಯ್ ಕಿರಣ್ ಸಿಂಗ ಚಿತ್ರದ ಮೂಲಕ ಬೇರೆಯದ್ದೇ ರೀತಿಯ ಚಿರಂಜೀವಿ ಸರ್ಜಾರನ್ನು ಪ್ರೇಕ್ಷರಿಗೆ ತೋರಿಸಲು ಮುಂದಾಗಿದ್ದಾರೆ. ಚಿರು ಪಾಲಿಗೆ ಈ ಪ್ರಾಜೆಕ್ಟು ಆರಂಭದಲ್ಲಿಯೇ ಇಷ್ಟವಾಗಿದ್ದೂ ಕೂಡಾ ಈ ಕಾರಣಕ್ಕಾಗಿಯೇ. ಇಷ್ಟು ವರ್ಷಗಳ ಕಾಲ ಥರ ಥರದ ಪಾತ್ರಗಳಲ್ಲಿ ನಟಿಸಿದ್ದರೂ ಕೂಡಾ ಮತ್ತೊಂದಷ್ಟು ಬದಲಾವಣೆಗಳಿಗೆ ಹಾತೊರೆದಿದ್ದ ಚಿರು ಪಾಲಿಗೆ ಸಿಂಗ ಚಿತ್ರದ ಮೂಲಕ ಅಂಥಾ ಅವಕಾಶವೊಂದು ತಾನೇ ತಾನಾಗಿ ಒದಗಿ ಬಂದಿದೆ.

ಆರಂಭದಲ್ಲಿ ಗೆಟಪ್ ಚೇಂಜ್ ಮಾಡಬೇಕೆಂಬ ಮಾತು ಬಂದಾಗ ಖುದ್ದು ಚಿರು ಆಗಾಗ ಒಂದೊಂದು ಥರದಲ್ಲಿ ದಾಡಿ ಶೇಪ್ ಮಾಡಿಕೊಂಡು ಆ ಫೋಟೋವನ್ನು ನಿರ್ದೇಶಕರಿಗೆ ಕಳಿಸುತ್ತಿದ್ದರಂತೆ. ನಂತರ ಒಂದಷ್ಟು ದಿನ ಅದನ್ನೇ ಮೇಂಟೇನು ಮಾಡಿ ನಂತರ ಅದಕ್ಕಿಂತಲೂ ಚೆಂದದ ಗೆಟಪ್ಪಿಗಾಗಿ ರೆಡಿಯಾಗುತ್ತಿದ್ದರಂತೆ. ಬಾಡಿ ಫೆಟ್ನೆಸ್, ನಟನೆ ಸೇರಿದಂತೆ ಎಲ್ಲದರಲ್ಲಿಯೂ ಚಿರು ಇಂಥಾದ್ದೇ ತನ್ಮಯತೆಯಿಂದಲೇ ರೆಡಿಯಾಗಿದ್ದಾರೆ. ಈ ಕಾರಣದಿಂದಲೇ ಅವರು ಹಳ್ಳಿ ಶೇಡಿನ ಪಾತ್ರಕ್ಕೂ ಸರಾಗವಾಗಿ ನ್ಯಾಯ ಒದಗಿಸಿದ್ದಾರೆ. ಒಟ್ಟಾರೆಯಾಗಿ ಇಂಥಾ ನಾನಾ ಸರ್ಕಸ್ಸುಗಳ ಮೂಲಕವೇ ಸಿಂಗ ಸ್ಪೆಷಲ್ ಅನ್ನಿಸಿಕೊಳ್ಳೋದರಲ್ಲಿ ಚಿರಂಜೀವಿ ಸರ್ಜಾ ಕೂಡಾ ಮಹತ್ವದ ಪಾತ್ರ ವಹಿಸಿದ್ದಾರೆ. ಅದೆಲ್ಲದರ ಫಲಿತಾಂಶ ಇದೇ ತಿಂಗಳ ಹತ್ತೊಂಬತ್ತರಂದು ಹೊರ ಬೀಳಲಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions