ಸಿಲ್ವರ್ ಸ್ಟಾರ್ ಇಂಡಿಯಾ ಪ್ರೆಸೆಂಟ್ಸ್ ಮಿಸ್ಟರ್ ಅಂಡ್ ಮಿಸ್ ಇಂಡಿಯಾ ಸೂಪರ್ ಮಾಡೆಲ್-2019 ಸೀಸನ್-8 


Tuesday, January 8th, 2019 10:14 am

ಬೆಂಗಳೂರು: ಕಳೆದ ಹತ್ತು ವರ್ಷಗಳಿಂದ ಸಿಲ್ವರ್ ಸ್ಟಾರ್ ಇಂಡಿಯಾ ಪ್ರತಿ ವರ್ಷವೂ ಫ್ಯಾಷನ್ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದೆ. ಈ ಬಾರಿಯೂ ನವಯುಗದ 2019ರ ಮೊದಲನೇ ಬೆಂಗಳೂರಿನ ಫ್ಯಾಷನ್ ಶೋ ಇದಾಗಿದ್ದೂ ಇದರಲ್ಲಿ 16 ಯುವತಿಯರು 13 ಯುವಕರು ಸ್ಪರ್ಧಿಯಾಗಿದ್ದಾರೆ.

ಈ 29ರಲ್ಲಿ ಸ್ಪರ್ಧಿಗಳಲ್ಲಿ ಯುವತಿಯರ ತಂಡದಿಂದ 3 ಹಾಗೂ ಯುವಕರ ತಂಡದಿಂದ 3 ಸೂಪರ್ ಮಾಡೆಲ್‍ಗಳು ತಮ್ಮ ಮುಡಿಗೆ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಇದರ ಜೊತೆ ಸ್ಯಾಂಡಲ್‍ವುಡ್‍ನ ಹೆಸರಾಂತ ನಾಯಕ ಹಾಗೂ ನಾಯಕಿಯರು ಪಾಲ್ಗೊಂಡಿದ್ದರು.

 ಪಾಲ್ಗೊಂಡಿದ್ದ ಚಲನಚಿತ್ರರಂಗದ ನಟ ನಟಿಯರಿವರು : ನಟ ಯಶಸ್ ಸೂರ್ಯ, ನಟಿ ಸಾಕ್ಷಿ, ನಟ ಸಂಚಾರಿ ವಿಜಯ್, ನಟ ಧನು ಗೌಡ, ನಟಿ ನಿಮಿಕಾ ರತ್ನಾಕರ್, ಶುಭಾ ರಕ್ಷಾ, ನಿರ್ದೇಶಕಿ ರಿಶಿಕಾ ಶರ್ಮ, ನಟ ನಿಹಾಲ್ , ಕಲಾವಿದ ರವಿ ರೆಡ್ಡಿ ಹಾಗೂ ರಾಣಿ ರಿಯಾ, ಸೇರಿದಂತೆ ಮುಂತಾದವರು ಭಾಗವಹಿಸಿದರು.

ಈ ಬಾರಿಯ ಫ್ಯಾಷನ್ ಶೋ ಗೋಕುಲ ಎಕ್ಸ್‍ಟೆಕ್ಷನ್‍ನಲ್ಲಿರುವ ಗೋಕುಲ ಗ್ರ್ಯಾಂಡ್ ಹೋಟೆಲ್ ಮತ್ತಿಕೆರೆ(ಯಶವಂತಪುರ) ಆಯೋಜಿಸಲಾಗಿತ್ತು. ಸಂಜೆ 6 ಗಂಟೆಯಿಂದ ಪ್ರಾರಂಭವಾದ ಫ್ಯಾಷನ್ ಶೋ ಅದ್ಧೂರಿಯಾಗಿ ಮೆರಗು ಮೂಡಿತ್ತು. ಇದರ ಬಗ್ಗೆ ಮಾತನಾಡಿದ ಆಯೋಜಕ ರವಿ “ಸತತವಾಗಿ ಹತ್ತು ವರ್ಷಗಳಿಂದ ಸಿಲ್ವರ್ ಸ್ಟಾರ್ಸ್ ಸಂಸ್ಥೆಯೂ ಚಿತ್ರರಂಗಕ್ಕೆ ಹಾಗೂ ಫ್ಯಾಷನ್ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. 2019ರ ಮೊದಲ ಫ್ಯಾಷನ್ ಶೋ ಇದಾಗಿದ್ದೂ, ವರ್ಷಾಂತ್ಯದ ಒಳಗೆ ನಾಲ್ಕಕ್ಕೂ ಅಧಿಕ ಫ್ಯಾಷನ್ ಶೋಗಳನ್ನು ಆಯೋಜಿಸಲಿದ್ದೇವೆ ನಮ್ಮಲ್ಲಿ ಗೆದ್ದಂತಹ ಮಾಡೆಲ್‍ಗಳಿಗೆ ಸಿನಿಮಾ ಮಾಡುವ ಯೋಜನೆಯನ್ನು ಹೊಂದಿದ್ದೇವೆ.

ಯುವತಿಯರು , ವಿನ್ನರ್: ಅಸ್ಮಿತಾ ಸಿಂಗ್-ಮಿಸ್ ಇಂಡಿಯಾ ಸೂಪರ್ ಮಾಡೆಲ್-2019 ಆಗಿ ಕಿರೀಟವನ್ನು ಮುಡಿಗೇರಿಸಿಕೊಂಡರು.

ರಿಮ್‍ಜಿಂಮ್ ಗುಪ್ತ- ಫಸ್ಟ್ ರನ್ನರ್ ಅಪ್

ಸಪ್ನ ಸಿಂಗ್ -ಸೆಕೆಂಡ್ ರನ್ನರ್ ಅಪ್

ಯುವಕರು  : ಜಗದೀಶ್-ಮಿಸ್ಟರ್ ಇಂಡಿಯಾ ಸೂಪರ್ ಮಾಡೆಲ್-2019 ಆಗಿ ಕಿರೀಟವನ್ನು ಮುಡಿಗೇರಿಸಿಕೊಂಡರು.

ಅಭಿಷೇಕ್ -ಫಸ್ಟ್ ರನ್ನರ್ ಅಪ್

ವಿಕ್ರಮ್-ಸೆಕೆಂಡ್ ರನ್ನರ್ ಅಪ್

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions