ಪಕ್ಷದ್ರೋಹಿ ಜಾಧವ್ ಗೆ ಪಾಠ ಕಲಿಸಿ, ಖರ್ಗೆ ಗೆಲ್ಲಿಸಿ : ಸಿದ್ದರಾಮಯ್ಯ ಕರೆ


Wednesday, April 17th, 2019 8:29 pm

ಯಾದಗಿರಿ : ತನ್ನದು ಕಾಂಗ್ರೆಸ್ ಮನೆತನ ಎಂದು ಹೇಳಿಕೊಳ್ಳುತ್ತಿದ್ದ ಜಾಧವ್​ ಈಗ ದುಡ್ಡು ತೆಗೆದುಕೊಂಡು ಪಕ್ಷಕ್ಕೆ ದ್ರೋಹ ಬಗೆದು ಬಿಜೆಪಿಗೆ ಹೋಗಿದ್ದಾರೆ. ಪಕ್ಷದ್ರೋಹಿ ಜಾಧವ್​ಗೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.

ಕಾಂಗ್ರೆಸ್​​ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಪರ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು,ಬಿಜೆಪಿ ಅಭ್ಯರ್ಥಿಯಾಗಿರುವ ಉಮೇಶ್​ ಜಾಧವ್​ಗೆ ಈ ಹಿಂದೆ ಮಾಜಿ ಸಿಎಂ ಧರಂ ಸಿಂಗ್​ ಟಿಕೆಟ್​ ಕೊಟ್ಟು ಶಾಸಕನಾಗಿ ಮಾಡಿದ್ದರು. ಜಾಧವ್​ ಈಗ ದುಡ್ಡು ತೆಗೆದುಕೊಂಡು ಪಕ್ಷಕ್ಕೆ ದ್ರೋಹ ಬಗೆದು ಬಿಜೆಪಿಗೆ ಹೋಗಿದ್ದಾರೆ. ಪಕ್ಷದ್ರೋಹಿ ಜಾಧವ್​ಗೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.

ಲೋಕಸಭೆಯಲ್ಲಿ ಕಾಂಗ್ರೆಸ್​ ಪಕ್ಷದ ಸಂಸದೀಯ ನಾಯಕರಾಗಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಖರ್ಗೆ ಅವರನ್ನು ಸಂಸತ್​ನಲ್ಲಿ ಎದುರಿಸುವಷ್ಟು ಶಕ್ತಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗಿಲ್ಲ. ಹಾಗಾಗಿ ಅವರನ್ನು ಸೋಲಿಸಲು ಯೋಜನೆ ರೂಪಿಸಲಾಗಿದೆ , ಜಾಧವ್ ಅವರನ್ನು ಸೋಲಿಸಿ ಖರ್ಗೆಯನ್ನು ಗೆಲ್ಲಿಸಿ ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions