ನಿಯಂತ್ರಣ ತಪ್ಪಿ ನಾಲ್ಕು ವಾಹನಗಳಿಗೆ ಡಿಕ್ಕಿ ಹೊಡೆದ ನಟ ಸಿದ್ದಾರ್ಥ್ ಶುಕ್ಲ ಕಾರು : ನಾಲ್ಕು ಜನರಿಗೆ ಗಾಯ


Saturday, July 21st, 2018 9:24 pm

ಮುಂಬೈ : ಟಿವಿ ನಟ ಸಿದ್ದಾರ್ಥ್ ಶುಕ್ಲಾರ ಬಿಎಂಡಬ್ಲ್ಯೂ ಕಾರು ಶನಿವಾರ ಸಂಜೆ ನಿಯಂತ್ರಣ ಕಳೆದುಕೊಂಡ ಪರಿಣಾಮ ರಸ್ತೆಯಲ್ಲಿ ಸಾಗುತ್ತಿದ್ದ ಇತರ ಕಾರುಗಳಿಗೆ ಡಿಕ್ಕಿ ಹೊಡೆದು, ಕೊನೆಗೆ ಡಿವೈಡರ್ ಮೇಲೆ ಹತ್ತಿದ ಘಟನೆ ನಡೆದಿದೆ.

ಸಿದ್ಧಾರ್ಥ್ ಐಷಾರಾಮಿ ಕಾರಿನಲ್ಲಿದ್ದ ಕಾರಣ ಅವರಿಗೆ ಗಾಯ ಆಗಲಿಲ್ಲ. ಆದರೆ ಇತರ ವಾಹನಗಳಲ್ಲಿದ್ದ ವ್ಯಕ್ತಿಗಳಿಗೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ಪ್ರಕಾರ ಸಿದ್ಧಾರ್ಥ್ ಶನಿವಾರ ಸಂಜೆ ಆರು ಗಂಟೆ ಸುಮಾರಿಗೆ ತಮ್ಮ ಬಿಎಂಡಬ್ಲ್ಯೂ ಕಾರಿನಲ್ಲಿ ಶ್ರೀಜಿ ಹೋಟೆಲ್ ಬಳಿ ಸಾಗುತ್ತಿದ್ದರು. ಈ ಸಮಯದಲ್ಲಿ ಕಾರಿನ ನಿಯಂತ್ರಣ ತಪ್ಪಿ ಇನೋವಾ ಕಾರಿಗೆ ಡಿಕ್ಕಿ ಹೊಡೆದಿದೆ. ನಂತರ ನಾಲ್ಕು ವಾಹನಗಳಿಗೆ ಡಿಕ್ಕಿ ಹೊಡೆದು ಕೊನೆಗೆ ಡಿವೈಡರ್ ಗೆ ಗುದ್ದಿಗೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಸಿದ್ದಾರ್ಥ್ ಶುಕ್ಲ ದಿಲ್ ಸೆ ದಿಲ್ ತಕ್ , ಆಹಟ್, ಬಾಲಿಕಾ ವಧು, ಖತರೋಂಕಿ ಖಿಲಾಡಿ, ಕಾಮೆಡಿ ಕ್ಲಾಸಸ್ ಮತ್ತು ಹಿಂದಿ ಚಿತ್ರ ಹಮ್ ಟಿ ಶರ್ಮಾ ಕಿ ದುಲ್ಹನಿಯಾ ಚಿತ್ರದಲ್ಲಿ ನಟಿಸಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions