ಸುಭಾಷಿತ :

Monday, September 23 , 2019 3:54 PM

ಬಿಜೆಪಿಯವರು ಕೆಲ ಆಯ್ದ ರಾಜ್ಯಗಳಲ್ಲಿ `ಇವಿಎಂ ಟ್ಯಾಂಪರ್’ ಮಾಡುತ್ತಾರೆ : ಸಿದ್ದರಾಮಯ್ಯ ಗಂಭೀರ ಆರೋಪ


Wednesday, May 22nd, 2019 4:24 pm

ಮೈಸೂರು : ಬಿಜೆಪಿಯವರು ಬೈ ಎಲೆಕ್ಷನ್ ನಲ್ಲಿ ಇವಿಎಂ ಟ್ಯಾಂಪರ್ ಮಾಡಲ್ಲ. ಆದರೆ ಜನರಲ್ ಎಲೆಕ್ಷನ್ ನಲ್ಲಿ ಬಿಜೆಪಿಯವರು ಇವಿಎಂ ಟ್ಯಾಂಪರಿಂಗ್ ಮಾಡುತ್ತಾರೆ, ಬೈ ಎಲೆಕ್ಷನ್ ನಲ್ಲಿ ನಮ್ಮ ಪರ ವೋಟ್ ಬರುತ್ತೆ, ಆದರೆ ಸಾರ್ವತ್ರಿಕ ಚುನಾವಣೆಯಲ್ಲಿ ಯಾಕೆ ಬರಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನನಗೆ ಇವಿಎಂ ಮೇಲೆ ಬಲವಾದ ಅನುಮಾನ ಇದೆ. ಇವಿಎಂ ಸಾಫ್ಟ್ ವೇರ್ ಮೇಲೆ ಕೆಲಸ ಮಾಡುತ್ತೆ. ಹೀಗಾಗಿ ಟ್ಯಾಂಪರ್ ಆದರೂ ಅಶ್ಚರ್ಯ ಪಡಬೇಕಿಲ್ಲ. ಬಿಜೆಪಿಯವರು ಕೆಲ ಆಯ್ದ ರಾಜ್ಯಗಳಲ್ಲಿ ಇವಿಎಂ ಟ್ಯಾಂಪರ್ ಮಾಡುತ್ತಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಲೋಕಸಭೆ ಚುನಾವಣೆ ನಂತರ ಎಕ್ಸಿಟ್ ಫೋಲ್ ಸಮೀಕ್ಷೆ ಹೊರಬಿದ್ದ ಬಳಿಕ ವಿರೋಧ ಪಕ್ಷಗಳು, ಇವಿಎಂ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದು, ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಅವರೂ ದನಿಗೂಡಿಸಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions