`ಸೈರಾ ನರಸಿಂಹ ರೆಡ್ಡಿ’ ಸಿನಿಮಾದಲ್ಲಿ ಶ್ರುತಿ ಹಾಸನ್ ನಟನೆ!?


Friday, March 15th, 2019 8:26 am

ಸಿನಿಮಾಡೆಸ್ಕ್ : ಮೆಗಾ ಸ್ಟಾರ್ ಚಿರಂಜೀವಿ ನಟನೆಯ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಒಂದು ಮಹತ್ವದ ಪಾತ್ರಕ್ಕೆ ಶೃತಿ ಹಾಸನ್ ಗೆ ಆಫರ್ ಮಾಡಲಾಗಿದೆಯಂತೆ.

2017 ರಲ್ಲಿ ತೆರೆಕಂಡ ಕಾಟಮರಾಯುಡು ನಂತರ ಶ್ರುತಿ ಹಾಸನ್ ನಟನೆಯ ಯಾವೊಂದು ಸಿನಿಮಾ ತೆರೆಗೆ ಬಂದಿಲ್ಲ. ಕಮಲಹಾಸನ್ ನಟಿಸಿ ನಿರ್ದೇಶಿಸಿದ್ದ ಸಭಾಷ್ ನಾಯ್ಡು ಚಿತ್ರದಲ್ಲಿ ಶ್ರುತಿ ನಟಿಸುತ್ತಿದ್ದು, ಆದರೆ, ಆ ಸಿನಿಮಾ ಇನ್ನು ತೆರೆಗೆ ಬಂದಿಲ್ಲ. ಸದ್ಯ ಅವರು ಸೈರಾ ನರಸಿಂಹರೆಡ್ಡಿ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.

ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ವಿಜಯ್ ಸೇತುಪತಿ, ಸುದೀಪ್, ಅಮಿತಾಬ್ ಬಚ್ಚನ್ ನಂತಹ ಕಲಾವಿದರ ದಂಡೇ ಇದೆ. ಇದೀಗ ಶ್ರುತಿ ಕುಡ ಚಿತ್ರತಂಡ ಸೇರಿಕೊಂಡರೆ ಸಿನಿಮಾದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಲಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions