ಮೊದಲ ಪಂದ್ಯದಲ್ಲೇ ಗಾಯಗೊಂಡು ಮೈದಾನ ತೊರೆದ ಶಾರ್ದೂಲ್


Friday, October 12th, 2018 11:36 am

ಹೈದರಾಬಾದ್ : ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದ್ವಿತೀಯ ಪಂದ್ಯದಲ್ಲಿ ಬಲಗೈ ವೇಗಿ ಶಾರ್ದೂಲ್ ಠಾಕೂರ್ ಪದಾರ್ಪಣೆ ಮಾಡಿರುವುದು ತಿಳಿದಿರುವ ವಿಚಾರ.

ಆದರೆ ಇದೀಗ ತಮ್ಮ ಡೆಬ್ಯು ಪಂದ್ಯದಲ್ಲೇ ಗಾಯಕ್ಕೊಳಗಾಗಿರುವ ಶಾರ್ದೂಲ್ ಮೈದಾನ ತೊರೆದಿರುವ ಘಟನೆ ನಡೆದಿದೆ. ಪಂದ್ಯದ ನಾಲ್ಕನೇ ಹಾಗೂ ತಮ್ಮ 1.4ನೇ ಓವರ್‌ ದಾಳಿ ನಡೆಸಿದ ಶಾರ್ದೂಲ್ ಗಾಯದ ಸಮಸ್ಯೆಗೊಳಗಾದರು. ಬಳಿಕ ಫಿಸಿಯೋ ಸಲಹಯಂತೆ ಮೈದಾನ ತೊರೆಯಬೇಕಾಯಿತು. ಇದರಿಂದ ಭಾರತಕ್ಕೆ ಓರ್ವ ಬೌಲರ್‌ನ ಅಭಾವ ಕಾಡಿದೆ. ಬಳಿಕ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಓವರ್ ಪೂರ್ಣಗೊಳಿಸಿದರು

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions