ಆ ದಿನಗಳಲ್ಲಿ ಲೈಂಗಿಕ ಕ್ರಿಯೆ ಮಾಡಿದ್ರೆ ಏನಾಗುತ್ತೆ?
Wednesday, October 10th, 2018 11:20 am
ಸ್ಪೆಷಲ್ ಡೆಸ್ಕ್ : ಮಹಿಳೆಯರಿಗೆ ಪ್ರತಿ ತಿಂಗಳು ಉಂಟಾಗುವ ನೈಸರ್ಗಿಕ ಕ್ರಿಯೆ ಎಂದರೆ ಅದು ಋತುಸ್ರಾವ. ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ ಇದು ಸಾಮಾನ್ಯವಾಗಿ ಆಗುತ್ತದೆ. ಆದರೆ ಈ ಸಮಯದಲ್ಲಿ ಸೆಕ್ಸ್ ಮಾಡಬಹುದೇ? ಅನ್ನೋದು ಹಲವರ ಪ್ರಶ್ನೆಯಾಗಿರುತ್ತದೆ
ಋತುಸ್ರಾವದ ಸಮಯದಲ್ಲಿ ಸೆಕ್ಸ್ ಮಾಡಿದರೆ ಏನು ಉಪಯೋಗ ಇದೆ.. ಏನು ದುಷ್ಪರಿಣಾಮ ಇದೆ ನೋಡೋಣ…
ಲೈಂಗಿಕ ಕ್ರಿಯೆ ವೇಳೆ ಸೆಳೆತ ಕಡಿಮೆಯಾಗುವುದು. ಗರ್ಭಕೋಶವು ತನ್ನ ಒಳಪದರ ಬಿಡುಗಡೆ ಮಾಡುವ ಪರಿಣಾಮವಾಗಿ ಸೆಳೆತ ಉಂಟಾಗುವುದು. ಪರಾಕಾಷ್ಠೆ ವೇಳೆ ಗರ್ಭಕೋಶದ ಸ್ನಾಯುಗಳು ಮತ್ತಷ್ಟು ಸಂಕುಚಿತವಾಗುವುದು ಮತ್ತು ಇದರ ಬಳಿಕ ಬಿಡುಗಡೆಯಾಗುವುದು.ಇದರಿಂದಾಗಿ ಪಿರಿಯಡ್ಸ್ ನ ಹೊಟ್ಟೆ ಕಾಣಿಸುವುದಿಲ್ಲ.
ಹಾರ್ಮೋನು ವೈಪರಿತ್ಯದಿಂದಾಗಿ ಋತುಚಕ್ರದ ಸಮಯದಲ್ಲಿ ಕಾಮಾಸಕ್ತಿಯಲ್ಲಿ ಬದಲಾವಣೆಯಾಗುವುದು. ಹೆಚ್ಚಿನವರ ಲೈಂಗಿಕ ಆಸಕ್ತಿ ಹೆಚ್ಚುತ್ತದೆ.
ಋತುಚಕ್ರದ ವೇಳೆ ಲ್ಯೂಬ್ರಿಕೆಂಟ್ ಬಳಕೆ ಮಾಡುವ ಅವಶ್ಯಕತೆ ಇಲ್ಲ. ಯಾಕೆಂದರೆ ರಕ್ತವು ನೈಸರ್ಗಿಕ ಲ್ಯೂಬ್ರಿಕೆಂಟ್ ಆಗಿ ಕೆಲಸ ಮಾಡುವುದು.
ಋತುಚಕ್ರದ ವೇಳೆ ಹೆಚ್ಚಿನ ಮಹಿಳೆಯರಿಗೆ ಮೈಗ್ರೇನ್ ತಲೆನೋವು ಕಾಣಿಸಿಕೊಳ್ಳುವುದು. ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವಂತಹ ತಲೆನೋವು ಅಲ್ಪ ಅಥವಾ ಸಂಪೂರ್ಣವಾಗಿ ಶಮನವಾಗಿಬಹುದು.
ಋತುಚಕ್ರದ ವೇಳೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದರಿಂದ ಇರುವಂತಹ ಅಪಾಯವೆಂದರೆ ಲೈಂಗಿಕ ರೋಗಗಳಾಗಿರುವ ಎಚ್ ಐವಿ ಅಥವಾ ಹೆಪಟಿಟಿಸ್ ಹರಡಬಹುದು.