ಸುಭಾಷಿತ :

Friday, November 22 , 2019 6:46 AM

ದಿಢೀರ್ ಆಗಿ ತಯಾರಿಸಿ ಸೇವ್ ಚಾಟ್ಸ್


Sunday, October 13th, 2019 1:54 pm

ಸ್ಪೆಷಲ್ ಡೆಸ್ಕ್ : ಚಾಟ್ಸ್ ತಿನ್ನುವ ಅಸೆ ಆಗುತ್ತಿದೆಯೇ? ಹೊರಗಡೆ ಹೋಗಿ ಅನಾರೋಗ್ಯಕರ ಚಾಟ್ ತಿನ್ನೋದು ಬೇಡ ಅಂದರೆ ಮನೆಯಲ್ಲಿಯೇ ರುಚಿಯಾದ ಟೊಮೇಟೊ ಚಾಟ್ಸ್ ತಯಾರಿಸಿ.

ಬೇಕಾಗುವ ಸಾಮಗ್ರಿಗಳು : ಈರುಳ್ಳಿ 2, ಕ್ಯಾರೆಟ್ 1, ಟೊಮೆಟೊ 3, ದುಂಡು ಮೆಣಸಿನ ಕಾಯಿ 1, ಸೇವ್ ಪುರಿ ಬೇಕಾದಷ್ಟು , ಚಾಟ್ ಮಸಾಲ1 ಚಮಚ, ಜೀರಿಗೆ 1 ಚಮಚ, ಕೆಂಪು ಮೆಣಸಿನ ಪುಡಿ 1ಚಮಚ, ನಿಂಬೆರಸ 1 ಚಮಚ, ಸೇವ್ 5 ಚಮಚ, ರುಚಿಗೆ ತಕ್ಕ ಉಪ್ಪು,ಕೊತ್ತಂಬರಿ ಸೊಪ್ಪು

ತಯಾರಿಸುವ ವಿಧಾನ:
ಬಟ್ಟಲಿನಲ್ಲಿ ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಕ್ಯಾರೆಟ್, ದುಂಡು ಮೆಣಸಿನಕಾಯಿ ಇವುಗಳನ್ನು ಮಿಶ್ರಣ ಮಾಡಬೇಕು.
ನಂತರ ಕೆಂಪು ಮೆಣಸಿನ ಪುಡಿ, ರುಚಿಗೆ ತಕ್ಕ ಉಪ್ಪು, ಜೀರಿಗೆ, ಹಾಗೂ ತರಕಾರಿಗಳನ್ನು ಹಾಕಿ ಮಿಕ್ಸ್ ಮಾಡಿ.
ಒಂದು ಟೊಮೆಟೊವನ್ನು ಸಣ್ಣದಾಗಿ ಕತ್ತರಿಸಿ ಅದಕ್ಕೆ ಸೇರಿಸಿ.
ಪುರಿ ತುಂಡುಗಳನ್ನು ಹಾಗೂ ಸೇವ್ಸ್ ನ್ನು ಚೆನ್ನಾಗಿ ಪುಡಿ ಮಾಡಿ ಈಗಾಗಲೇ ತಯಾರಿಸಿಟ್ಟ ಮಿಶ್ರಣಕ್ಕೆ ಸೇರಿಸಿ.
ಅದರ ಮೇಲೆ ಸ್ವಲ್ಪ ಚಾಟ್ ಮಸಾಲ ಹಾಗೂ ಹಾಗೂ ಸೇವ್ ಉದುರಿಸಿ ಮಿಶ್ರಣ ಮಾಡಿ ನಂತರ ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಬೇಕು.
ಈಗ ರುಚಿಯಾದ ಸೇವ್ ಚಾಟ್ ಸವಿಯಲು ರೆಡಿ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions