ಇದು ಫ್ಯಾಷನ್ ಯುಗ… ಇಲ್ಲಿ ಹೀಗೂ ಸೀರೆ ಉಡಬಹುದು


Sunday, September 16th, 2018 3:18 pm

ಸ್ಪೆಷಲ್ ಡೆಸ್ಕ್ : ಹಿಂದಿನ ಕಾಲದಲ್ಲಿ ಸೀರೆ ಎಂದರೆ ಅದೊಂದು ಸಾಂಪ್ರದಾಯಿಕ ಉಡುಗೆಯಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಇಂದಿನ ದಿನಗಳಲ್ಲಿ ಸೀರೆ ಎಂದರೆ ಫ್ಯಾಷನ್ ಟ್ರೆಂಡ್ ಆಗಿದೆ. ಅದನ್ನು ಬೇರೆ ಬೇರೆ ರೀತಿಯಲ್ಲಿ ಉಡಬಹುದು. ನೀವು ಕೂಡ ಅದನ್ನು ಟ್ರೈ ಮಾಡಬಹುದು. 

ಜೀನ್ಸ್ ಜೊತೆ ಸೀರೆ : ಇದು ಹೊಸ ಟ್ರೆಂಡ್ ಆಗಿದೆ. ಪೇಟಿಕೋಟ್ ಬದಲಾಗಿ ಜೀನ್ಸ್ ಧರಿಸಿ ಅದರ ಮೇಲೆ ಬ್ಲೌಸ್ ಧರಿಸಿ ಅದರ ಮೇಲೆ ಸೀರೆ ಉಟ್ಟರೆ ಸಖತ್ ಸ್ಟೈಲಿಶ್ ಆಗಿ ಕಾಣುವಿರಿ.

ಸೀರೆ ಜೊತೆ ಜಾಕೆಟ್​: ಕ್ಲಾಸಿಕ್​ ಮತ್ತು ರೆಟ್ರೋ ಎರಡರ ಫ್ಯೂಷನ್​ ಲುಕ್​ ಈ ಜ್ಯಾಕೆಟ್​​ ಸೀರೆಗಳು. ಸಿಂಪಲ್​ ಪ್ಲೇನ್​ ಸೀರೆ ಮೇಲೆ ಎಂಬ್ರಾಯ್ಡರಿ ವರ್ಕ್​ ಇರುವ ಜಾಕೆಟ್​ ಒಳ್ಳೆಯ ಲುಕ್​ ನೀಡುತ್ತಿದೆ. ಅಥವಾ ಸೀರೆಯ ಬಣ್ಣಕ್ಕೆ ಕಾಂಟ್ರಾಸ್ಟ್​ ಆಗುವ ಬಣ್ಣದ ಜಾಕೆಟ್​ ಸಹ ಮಸ್ತ್​ ಲುಕ್​ ನೀಡುತ್ತದೆ.

ಧೋತಿ ಸ್ಟೈಲ್​ ಸೀರೆ: ಫ್ಯೂಷನ್​ ಲುಕ್​ನಲ್ಲಿ ಕಾಣಿಸಿಕೊಳ್ಳಬೇಕೆಂದಿದ್ದರೇ ಧೋತಿ ಸೀರೆಯನ್ನು ಟ್ರೈ ಮಾಡಿ. ಇದಕ್ಕೆ ಸ್ವಲ್ಪ ದೊಡ್ಡದಾದ ಕತ್ತಿನ ಆಭರಣಗಳನ್ನು ಧರಿಸಿದರೆ ಈ ಲುಕ್​ ರಿಚ್​ ಆಗಿ ಕಾಣುತ್ತದೆ. ಇದು ಸೀರೆ ಮತ್ತು ಡ್ರೆಸ್​ ಎರಡರ ಫ್ಯೂಷನ್​ ಆಗಿ ನಿಮ್ಮ ಅಂದವನ್ನು ಹೆಚ್ಚಿಸುತ್ತದೆ. ಈಗಾಗಲೇ ಬಾಲಿವುಡ್​ ತಾರೆ ಶಿಲ್ಪಾಶೆಟ್ಟಿ ಧೋತಿ ಸೀರೆಯುಟ್ಟು ಮಿಂಚಿದ್ದಾರೆ.

ಸ್ಲಿಟ್​ ಸೀರೆ: ಸೀರೆಗೆ ಗ್ಲಾಮರ್​ ಲುಕ್​ ನೀಡಲು ಈ ಸ್ಲಿಟ್​ ಸೇರೆ ಸ್ಟೈಲ್​ ಉತ್ತಮವಾಗಿದೆ. ಜಗ್ಗಿಂಗ್ಸ್​ ಮೇಲೆ ಒಂದು ಕಡೆ ಸ್ಲಿಟ್​ ಬರುವ ರೀತಿಯಲ್ಲಿ ಸೀರೆ ಉಟ್ಟರೇ ಒಳ್ಳೆಯ ಇಂಡೋ ವೆಸ್ಟರ್ನ್​ ಸ್ಟೈಲ್​ ನಿಮ್ಮದಾಗುತ್ತದೆ.

ಕ್ರಾಪ್ ಟಾಪ್ ಜೊತೆ ಸೀರೆ : ಹೌದು ಬ್ಲೌಸ್ ಬದಲು ಕ್ರಾಪ್ ಟಾಪ್ ಜೊತೆ ಸೀರೆಯುತಟ್ಟರೆ ಇನ್ನಷ್ಟು ಗ್ಲಾಮರಸ್ ಲುಕ್ ನಿಮ್ಮದಾಗುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions