ಹಳ್ಳಿ ಹುಡುಗಿಯರಿಂದ… ಮಾಡರ್ನ್ ಬೆಡಗಿಯವರೆಗೆ ಎಲ್ಲರ ಮನಸ್ಸನ್ನು ಸೂರೆಗೊಳ್ಳುವ ಸೀರೆ


Friday, December 21st, 2018 5:36 pm

ಸ್ಪೆಷಲ್ ಡೆಸ್ಕ್ : ಸೀರೆ ಹುಟ್ಟಿಕೊಂಡಿರುವುದು ಇಂದು ನಿನ್ನೆಯಲ್ಲ. ಸೀರೆ ಪ್ರಪಂಚದ ಅತ್ಯಂತ ಹಳೆಯ ಉಡುಗೆಯಾಗಿದೆ. ಇದು ಮೆಸಪೊಟೋಮಿಯೋ ನಾಗರಿಕತೆಯ ಕಾಲದಲ್ಲಿಯೇ ಹುಟ್ಟಿಕೊಂಡಿದೆ ಎಂದು ಹೇಳಲಾಗುತ್ತದೆ. ಭಾರತೀಯರಿಗೆ ಪ್ರಿಯವಾದ ಸೀರೆ.

ಇಂದು ಅಂತಾರಾಷ್ಟ್ರೀಯ ಸೀರೆ ದಿನ. ಈ ದಿನ ಸೀರೆ ಕುರಿತಾದ ಕೆಲವೊಂದು ವಿಶೇಷ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತವೆ.

ಭಾರತದಲ್ಲಿ ಸಿಗುವಂತಹ ಜನಪ್ರಿಯ ಸೀರೆಗಳು ಇವು…

ಮೈಸೂರು ಸಿಲ್ಕ್ ಸೀರೆ : ರಾಷ್ಟ್ರಮಟ್ಟದಲ್ಲಿ ಮಹಿಳೆಯರ ಮನಸ್ಸನ್ನು ಸೂರೆಗೊಂಡಿರುವ ವಿಶ್ವವಿಖ್ಯಾತ ರೇಷ್ಮೆ ಸೀರೆ ಮೈಸೂರ್ ಸಿಲ್ಕ್ ಸೀರೆ. ‘ಮೈಸೂರು ಸಿಲ್ಕ್ ಸೀರೆ’ಯ ವಿಶೇಷತೆ ಎಂದರೆ ಶುದ್ಧ ರೇಷ್ಮೆ ಮತ್ತು ಶೇ.100% ರಷ್ಟು ಶುದ್ಧ ಚಿನ್ನದ ಜರಿಯ ಬಳಕೆ ಮಾಡಲಾಗುತ್ತದೆ.

ಲಹರೀಯಾ: ಲಹರೀಯಾ ಪ್ರಿಂಟ್ ಜನಪ್ರಿಯ ಟ್ರೆಂಡ್. ಲಹರೀಯಾ ರಾಜಸ್ತಾನದ ಡಿಸೈನ್ ಆಗಿದೆ.

ಕಾಂಚೀವರಂ: ಇದರ ಇತಿಹಾಸ 150 ವರ್ಷಗಳ ಹಿಂದಿನದ್ದು, ಇದು ತನ್ನ ಗೋಲ್ಡ್ ಹಾಗೂ ಸಿಲ್ವರ್ ಬಣ್ಣದ ಥ್ರೆಡ್ ಎಂಬ್ರಾಯ್ಡರಿಗೆ ಹೆಸರುವಾಸಿಯಾಗಿದೆ.

ಹ್ಯಾಂಡ್ ಲೂಮ್ ಸೀರೆ : ಇದರಲ್ಲಿ ಎಲ್ಲಾ ರೀತಿಯ ಸೀರೆಗಳು ದೊರೆಯುತ್ತದೆ. ಅದರಲ್ಲೂ ಮುಖ್ಯವಾಗಿ ಖಾದಿ, ಕಾಟನ್ ಸೀರೆಗಳು ಸುಂದರವಾದ ಡಿಸೈನ್ ಮಾತು ವರ್ಕ್ ಜೊತೆ ಬರುತ್ತದೆ.

ಬನಾರಸಿ ಸೀರೆ: ಬನಾರಸಿ ಸೀರೆಗಳು ನಿಮಗೆ ರಾಯಲ್ ಲುಕ್‌ ನೀಡುತ್ತದೆ. ರೇಷ್ಮೇ , ಗೋಲ್ಡನ್ ಹಾಗೂ ಸಿಲ್ವರ್ ಎಂಬ್ರಾಯ್ಡರಿಗೆ ಫೇಮಸ್.

ಕಸವು ಸೀರೆ : ಕಸವು ಸೀರೆ ಚಿನ್ನದ ಬಣ್ಣ ಹಾಗೂ ಕ್ರೀಮ್ ಕೂದಲಿನ ಬಣ್ಣದ ಸೀರೆಯಾಗಿದ್ದು, ಮಲಯಾಳಂ ಮಹಿಳೆಯರಿಂದ ಧರಿಸಲ್ಪಡುತ್ತದೆ. ಇದು ಕೈಗವಸ್ತುವಿನಿಂದ ವಿನ್ಯಾಸಗೊಂಡಿದ್ದು, ಶುದ್ಧ ಚಿನ್ನದ ಬಣ್ಣದಲ್ಲಿ ಮಾಡಿದ ಸೀರೆಯ ಅಂಚುಗಳ ಮೂಲಕ ಅದರ ಗ್ಲಾಮರ್‍ನ್ನು ಹೆಚ್ಚಿಸುತ್ತದೆ.

ಬಾಂದನಿ: ಬಾಂದನಿ ರಾಜಸ್ತಾನದ ಫೇಮಸ್ ಸೀರೆ. ಈ ಸೀರೆಗಳು ಬಾರೀ ಹಾಗೂ ಹಗುರದ ಫ್ಯಾಬ್ರಿಕ್‌ನಲ್ಲಿ ಸಿಗುತ್ತದೆ.

ನೆಟೆಡ್ ವರ್ಕ್ ಸೀರೆ : ನೆಟೆಡ್ ವರ್ಕ್ ಇರುವ ಸೀರೆಗಳು ಈಗ ಮಹಿಳೆಯರ ಹಾಟ್ ಫೇವರಿಟ್ ಎನಿಸಿಕೊಂಡಿವೆ. ತೆಳ್ಳನೆಯ ಮೈಕಟ್ಟು ಇರುವ ಮಹಿಳೆಯರಿಗೆ ನೆಟೆಡ್ ಸೀರೆ ಪರ್ಫೆಕ್ಟ್ ಲುಕ್ ನೀಡುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions