ಸುಭಾಷಿತ :

Sunday, January 26 , 2020 4:19 AM

ಈ ಎಲ್ಲಾ ಗುಣಗಳಿಂದಲೇ ಸಪೋಟ ಆರೋಗ್ಯದ ಮಿತ್ರ ಎನಿಸಿಕೊಳ್ಳುವುದು


Tuesday, July 9th, 2019 2:32 pm

ಸ್ಪೆಷಲ್ ಡೆಸ್ಕ್ : ಸಪೋಟ ಹಣ್ಣು ಎಂದರೆ ಇಷ್ಟ ಇರದೇ ಇರುವವರು ಯಾರು ಇಲ್ಲ. ಇದರ ರುಚಿ ಎಲ್ಲರಿಗೂ ಇಷ್ಟವಾಗುತ್ತದೆ. ಸಪೋಟದಲ್ಲಿ ವಿಟಮಿನ್ ಇ, ಎ, ಸಿ ಮತ್ತು ಕಬ್ಬಿಣ ಮತ್ತು ತಾಮ್ರದ ಗುಣಗಳನ್ನು ಹೊಂದಿದೆ. ಇದರಿಂದ ಆರೋಗ್ಯಕ್ಕೆ ಬೆಟ್ಟದಷ್ಟು ಪ್ರಯೋಜನಗಳಿವೆ. ಅವು ಯಾವುವು ನೋಡೋಣ…

ಸಪೋಟದಲ್ಲಿ ವಿಟಮಿನ್ ‘ಎ’ ಹೇರಳವಾಗಿದೆ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲು ನೆರವಾಗುತ್ತದೆ.
ಸಪೋಟದಲ್ಲಿ ನಾರಿನಂಶ, ಆ್ಯಂಟಿ ಆಕ್ಸಿಡೆಂಟ್‌ ಹಾಗೂ ಕ್ಯಾನ್ಸರ್‌ ನಿರೋಧಕ ಗುಣ ಇದೆ.
ಸಪೋಟ ಹಣ್ಣಿನಲ್ಲಿ ವಿಟಮಿನ್‌ ಎ ಅಧಿಕವಾಗಿರುವುದರಿಂದ ಕಣ್ಣುಗಳ ಆರೋಗ್ಯಕ್ಕೆ ಒಳ್ಳೆಯದು ಹಾಗೂ ದೃಷ್ಟಿ ಕೂಡ ಉತ್ತಮವಾಗುತ್ತದೆ.
ಸಪೋಟವನ್ನು ಹಾಗೆಯೇ ತಿಂದರೆ ಜೀರ್ಣಕ್ರಿಯೆಗೆ ಬೇಕಾದ ನಾರಿನಂಶವನ್ನು ದೇಹ ಪಡೆಯಲು ಸಾಧ್ಯವಾಗುತ್ತದೆ.
ಹಣ್ಣಿನಲ್ಲಿರುವ ಕ್ಯಾಲ್ಷಿಯಂ, ಗಂಧಕ, ಕಬ್ಬಿಣ ಹಾಗೂ ಇತರ ಖನಿಜಗಳು ಮೂಳೆಗಳನ್ನು ಆರೋಗ್ಯಕರವಾಗಿ ಹಾಗೂ ಬಲಿಷ್ಠಗೊಳಿಸಲು ನೆರವಾಗುತ್ತವೆ.
ಸಪೋಟದಲ್ಲಿರುವ ಕಾರ್ಬೋಹೈಡ್ರೇಟ್ಸ್ ಮತ್ತು ಪೋಷಕಾಂಶಗಳು ಗರ್ಭಿಣಿಯರಿಗೆ ತುಂಬಾ ಒಳ್ಳೆಯದು.
ಸಪೋಟ ಹಣ್ಣಿನಲ್ಲಿ ನಾರಿನಾಂಶ ಹೆಚ್ಚಾಗಿ ಇರುವುದರಿಂದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.
ಸಪೋಟದಲ್ಲಿ ಹೇರಳವಾಗಿರುವ ಪೊಟಾಶಿಯಂ ಅಂಶವು ದೇಹದ ಮಾಂಸಖಂಡಗಳ ಬಲವರ್ಧನೆಗೆ ನೆರವಾಗುತ್ತದೆ.
ಸಪೋಟ ರಕ್ತ ಶುದ್ಧಿ ಮಾಡುತ್ತದೆ ಹಾಗೂ ದೇಹದಲ್ಲಿ ರಕ್ತ ಉತ್ಪಾದಿಸಲು ಸಹಾಯ ಮಾಡುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions