#Me too : ‘ಗಂಡ-ಹೆಂಡತಿ’ ಶೂಟಿಂಗ್ ನ ಕಹಿ ಅನುಭವ ಬಿಚ್ಚಿಟ್ಟ ನಟಿ ಸಂಜನಾ!


Wednesday, October 17th, 2018 9:56 pm

ಸಿನಿಮಾ ಡೆಸ್ಕ್ : ಸದ್ಯ ಸಿನಿಮಾರಂಗದಲ್ಲಿ ಮೀಟೂ ಅಭಿಯಾನ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ನಟಿಯರು ತಮ್ಮ ಮೇಲಾದ ದೌರ್ಜನ್ಯ, ಲೈಂಗಿಕ ಕಿರುಕುಳದ ಬಗ್ಗೆ ದನಿ ಎತ್ತುತ್ತಿದ್ದಾರೆ. ಈಗ ನಟಿ ಸಂಜನಾ ಗರ್ಲಾನಿ ಕನ್ನಡ ನಿರ್ದೇಶಕನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ತಮ್ಮ ಕನ್ನಡದ ಮೊದಲ ಸಿನಿಮಾ ಗಂಡ ಹೆಂಡತಿ ಸಿನಿಮಾ ಶೂಟಿಂಗ್ ವೇಳೆ ಎದುರಾದ ಕಹಿ ಅನುಭವವನ್ನು ಸಂಜನಾ ಬಿಚ್ಚಿಟ್ಟಿದ್ದಾರೆ.

ಗಂಡ ಹೆಂಡತಿ ಸಿನಿಮಾ ಮಾಡಿದಾಗ ನನಗೆ 16 ವರ್ಷ. 2.5 ಲಕ್ಷ ಸಂಭಾವನೆ ಸಿಗುತ್ತದೆ ಎಂದು ಈ ಸಿನಿಮಾ ಒಪ್ಪಿಕೊಂಡೆ. ಹಿಂದಿಯ ಮರ್ಡರ್ ಸಿನಿಮಾ ನೋಡಿ ಬೇಜಾರಾಗಿತ್ತು. ಈ ಸಿನಿಮಾ ಮಾಡಲು ನನಗೆ ಧೈರ್ಯ ಇಲ್ಲ ಎಂದು ಹೇಳಿದ್ದೆ, ಆದರೆ ಒಂದೇ ಒಂದು ಕಿಸ್ ಸೀನ್ ಇರುತ್ತೆ, ನನ್ನನ್ನು ಮಗು ತರ ನೋಡ್ಕೊತಿನಿ ಎಂದು ಭರವಸೆ ನೀಡಿದ್ದರು.

ಮೊದಲ ದಿನ ಚೆನ್ನಾಗಿತ್ತು, ಆದರೆ ಮೂರನೇ ದಿನ ನಮ್ಮ ಅಮ್ಮನನ್ನು ಶೂಟಿಂಗ್ ಸೆಟ್ ಗೆ ಬರೋದಕ್ಕೆ ಬಿಡಲಿಲ್ಲ. ಅವರನ್ನು ವಾಪಸ್ ಕಳಿಸೋಕೆ ಯತ್ನಿಸಿದ್ದರು. ಒಂದೇ ಒಂದು ಕಿಸ್ ಸೀನ್ ಅಂತ 50 ಕ್ಕೂ ಹೆಚ್ಚು ಸೀನ್ ಮಾಡಿಸಿದರು. ಬ್ಯಾಕ್ ಲೆಸ್ ಸೀನ್ ಮಾಡುವಾಗ ನನಗೆ ಹಿಂಸೆ ಮಾಡಿದ್ದರು. ನನ್ನ ಮೇಲೆ ದಬ್ಬಾಳಿಕೆ ಮಾಡಿ ಆ ಸೀನ್ ಮಾಡಿಸಿಕೊಂಡರು ಎಂದು ಸಂಜನಾ ಹೇಳಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions