ಸುಭಾಷಿತ :

Monday, September 23 , 2019 3:52 PM

ವಿವೇಕ್ ಒಬೇರಾಯ್ ವಿವಾದಾತ್ಮಕ ಟ್ವೀಟ್ ಗೆ ಸಲ್ಮಾನ್ ಖಾನ್ ಹೇಳಿದ್ದೇನು!?


Wednesday, May 22nd, 2019 3:20 pm

ಮುಂಬೈ : ನಟ ವಿವೇಕ್ ಒಬೇರಾಯ್ ಮಾಡಿದ್ದ ವಿವಾದಾತ್ಮಕ ಟ್ವೀಟ್ ಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಪ್ರತಿಕ್ರಿಯೆ ನೀಡಿದ್ದು, ಯಾರೋ ಮಾಡಿದ ಟ್ವೀಟ್ ಮತ್ತು ಮೀಮ್ಸ್ ನೋಡುತ್ತಾ ಸಮಯ ವ್ಯರ್ಥ ಮಾಡಲ್ಲ ಎಂದು ಹೇಳಿದ್ದಾರೆ.

ಭಾರತ್ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ಸಲ್ಮಾನ್ ಖಾನ್, ಸಾಮಾಜಿಕ ಜಾಲತಾಣಗಳತ್ತ ನಾನು ಹೆಚ್ಚು ಗಮನ ಕೊಡಲ್ಲ. ಮೊದಲಿನಂತೆ ಸೋಶಿಯಲ್ ಮೀಡಿಯಾದಲ್ಲಿಯೂ ಹೆಚ್ಚು ಆ್ಯಕ್ಟೀವ್ ಆಗಿರಲ್ಲ. ಕಾಲಹರಣಕ್ಕಾಗಿ ಅನಾವಶ್ಯಕ ಟ್ವೀಟ್ ಗಳನ್ನು ಮಾಡಲ್ಲ. ನನಗೆ ನನ್ನದೇ ಆದ ಕೆಲಸಗಳಿವೆ. ಕೆಲಸದತ್ತ ಗಮನ ನೀಡದೇ ಯಾರೋ ಮಾಡಿದ ಟ್ವೀಟ್ ಮತ್ತು ಮೀಮ್ಸ್ ನೋಡುತ್ತಾ ಸಮಯ ವ್ಯರ್ಥ ಮಾಡಲ್ಲ ಎಂದು ಹೇಳಿದ್ದಾರೆ.

ಎಕ್ಸಿಟ್ ಪೋಲ್ ಕುರಿತಂತೆ ವಿವೇಕ್ ಒಬೆರಾಯ್, ನಟಿ ಐಶ್ವರ್ಯಾ ರೈ ವೈವಾಹಿಕ ಪೂರ್ವ ಖಾಸಗಿ ಜೀವನವನ್ನು ಬಿಂಬಿಸುವ ಮೀಮ್ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಎಕ್ಸಿಟ್ ಪೋಲ್ ಮೀಮ್ ವಿವಾದಕ್ಕೆ ಕಾರಣವಾಗುತ್ತಲೇ ಸ್ಪಷ್ಟನೆ ನೀಡಿದ ವಿವೇಕ್ ಒಬೆರಾಯ್ ಕ್ಷಮೆ ಕೇಳಿ ಟ್ವೀಟ್ ಡಿಲೀಟ್ ಮಾಡಿದ್ದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions