#MeToo ಅಭಿಯಾನ : ಹೌಸ್ ಪುಲ್ 4 ನಿರ್ದೇಶಕ ಸ್ಥಾನದಿಂದ ಕೆಳಗಿಳಿದ ಸಾಜಿದ್ ಖಾನ್


Friday, October 12th, 2018 1:43 pm

ಸಿನಿಮಾ ಡೆಸ್ಕ್ : ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಹೌಸ್ ಪುಲ್ 4 ಚಿತ್ರದ ನಿರ್ದೇಶಕ ಸ್ಥಾನಕ್ಕೆ ಸಾಜಿದ್ ಖಾನ್ ರಾಜೀನಾಮೆ ನೀಡಿದ್ದಾರೆ.

ಸಾಜಿದ್ ಖಾನ್ ಅವರಿಂದ ಲೈಂಗಿಕ ಕಿರುಕುಳ ಅನುಭವಿಸಿರುವುದಾಗಿ ನಟಿ ರಾಚೆಲ್ ವೈಟ್, ಸಹಾಯಕ ನಿರ್ದೇಶಕಿ ಸಲೊನಿ ಚೊಪ್ರಾ ಹಾಗೂ ಪತ್ರಕರ್ತ ಮಹಿಳೆಯೊಬ್ಬರು ಮಿ ಟೂ ಅಭಿಯಾನದಲ್ಲಿ ಆರೋಪ ಮಾಡಿದ್ದರು.

ಈ ಆರೋಪದ ಹಿನ್ನೆಲೆಯಲ್ಲಿ ಕುಟುಂಬ ಹಾಗೂ ಸಿನಿಮಾದ ನಿರ್ಮಾಪಕರು, ಕಲಾವಿದರ ಒತ್ತಡದಿಂದಾಗಿ ನೈತಿಕ ಹೊಣೆ ಹೊತ್ತು, ಸತ್ಯಾಂಶ ಹೊರಬರುವವರೆಗೂ ನಿರ್ದೇಶಕ ಸ್ಥಾನದಿಂದ ಹಿಂದೆ ಸರಿಯುತ್ತಿರುವುದಾಗಿ ಅವರು ಟ್ವಿಟ್ ಮಾಡಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions