ಸುಭಾಷಿತ :

Thursday, January 23 , 2020 6:00 PM

ರಿಲೀಸ್ ಗೂ ಮುನ್ನವೇ ‘ಬಾಹುಬಲಿ-2’ ದಾಖಲೆ ಮುರಿದ ‘ಸಾಹೋ’


Friday, August 23rd, 2019 8:15 pm

ಸಿನಿಮಾ ಡೆಸ್ಕ್ : ಬಾಹುಬಲಿ-2 ಚಿತ್ರದ ನಂತರ ಪ್ರಭಾಸ್ ನಟಿಸುತ್ತಿರುವ ಬಹುನಿರೀಕ್ಷಿತ `ಸಾಹೋ’ ಸಿನಿಮಾ ಭಾರೀ ನಿರೀಕ್ಷೆ ಹುಟ್ಟು ಹಾಕಿದೆ. ಸಿನಿಮಾ ರಿಲೀಸ್ ಗೂ ಮುನ್ನಸಖತ್ ಸೌಂಡ್ ಮಾಡುತ್ತಿದ್ದು,  ಆಗಸ್ಟ್ 30 ರಂದು ಬಿಡುಗಡೆಯಾಗುತ್ತಿದೆ.

ಈಗಾಗಲೇ ಟ್ರೇಲರ್, ಟೀಸರ್, ಸಾಂಗ್ ಗಳಿಂದಲೇ ಸಖತ್ ಹೈಪ್ ಕ್ರಿಯೇಟ್ ಮಾಡಿರುವ ಸುಜೀತ್ ನಿರ್ದೇಶನದ ಸಾಹೋ ಸಿನಿಮಾ ಹಿಂದಿ, ತಮಿಳು, ತೆಲುಗು, ಮಲೆಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

ಭಾರತದಲ್ಲಿ ಸುಮಾರು 4500 ಥಿಯೇಟರ್  ನಲ್ಲಿ ಸಿನಿಮಾ ತೆರೆ ಕಾಣುವ ಸಾಧ್ಯತೆಯಿದ್ದು, ಬಾಹುಬಲಿ 2 ದಾಖಲೆಗಳನ್ನು ರಿಲೀಸ್ ಗೂ ಮುನ್ನವೇ ಧೂಳಿಪಟ ಮಾಡುತ್ತಿದೆ.

ಹೌದು, ತಮಿಳುನಾಡು ಒಂದರಲ್ಲೇ 550 ಸಿನಿಮಾ ಥಿಯೇಟರ್ ಗಳಲ್ಲಿ ಸಾಹೋ ಪ್ರದರ್ಶನು ಕಾಣಲಿದೆ. ತಮಿಳುನಾಡಿನಲ್ಲಿ ಹೆಚ್ಚು ಸ್ಕ್ರೀನಿಂಗ್ ಕಾಣುತ್ತಿರುವುದರಿಂದ  ಅಲ್ಲಿನ ವ್ಯವಹಾರವೂ ಬಾಹುಬಲಿ 2 ತಮಿಳು ನಾಡಿನಲ್ಲಿ ಗಳಿಸಿದ್ದಕ್ಕಿಂತ ಹೆಚ್ಚು ಗಳಿಸಬಹುದು ಎನ್ನುವ ಲೆಕ್ಕಾಚಾರವಿದೆ.

ಇನ್ನೂ ತೆಲುಗು ಭಾಷೆಯಲ್ಲಿ ಸಾಹೋ 125 ಕೋಟಿಗೆ ಮಾರಾಟವಾಗಿದೆ, 2 ವರ್ಷಗಳ ಹಿಂದೆ 122 ಕೋಟಿ ರೂಪಾಯಿಗೆ ರಾಜಮೌಳಿ ಅವರ ಬಾಹುಬಲಿ 2 ವಿತರಣೆಯ ಹಕ್ಕು ಮಾರಾಟವಾಗಿತ್ತು. ಇದಲ್ಲದೇ ಸಂಭಾವನೆಯಲ್ಲಿ ಕೂಡ ಸಾಹೀ ಹಿಂದೆ ಬಿದ್ದಿಲ್ಲ, ಬಾಹುಬಲಿ 2 ಪ್ರಭಾಸ್ ತೆಗೆದುಕೊಂಡಿದ್ದಕ್ಕಿಂತಲೂ ಎರಡು ಮೂರು ಪಟ್ಟು ಸಂಭಾವನೆಯನ್ನು ಸಾಹೋಗಾಗಿ ಪಡೆದಿದ್ದಾರೆ ಎನ್ನಲಾಗಿದೆ.

ಈ ಸಿನಿಮಾದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ವಿಶೇಷ ಹಾಡೊಂದರಲ್ಲಿ ಸೊಂಟ ಬಳುಕಿಸಿದ್ದು, ಯೂಟ್ಯೂಬ್ ನಲ್ಲಿ ಭರ್ಜರಿ ಸೌಂಡ್ ಮಾಡುತ್ತಿದೆ.ಸಾಹೋ ಚಿತ್ರದ ಬ್ಯಾಡ್ ಬಾಯ್ ಹಾಡು ಯೂಟ್ಯೂಬ್ ನಲ್ಲಿ ಟಾಪ್ 2 ಟ್ರೆಂಡಿಂಗ್ ನಲ್ಲಿದೆ. ಇದುವರೆಗೆ 1.34 ಕೋಟಿ ವೀವ್ಸ್ ಕಂಡಿದೆ.. ಒಟ್ಟಿನಲ್ಲಿ ಸಿನಿಮಾ ಆಗಸ್ಟ್ 30 ರಂದು ರಿಲೀಸ್ ಆಗುತ್ತಿದ್ದು, ಸಿನಿಮಾ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions