ಆರ್​ಆರ್​ಆರ್ ಚಿತ್ರಕ್ಕೆ ಅಲಿಯಾ, ಅಜಯ್ ದೇವಗನ್ ಫಿಕ್ಸ್ …. ರಾಜಮೌಳಿ ಚಿತ್ರದ ಸ್ಟೋರಿ ಲೈನ್ ಏನು?


Thursday, March 14th, 2019 1:50 pm

ಸಿನಿಮಾ ಡೆಸ್ಕ್ : ಆರ್​ಆರ್​ಆರ್ ಚಿತ್ರದ ನಿರ್ದೇಶಕ ಎಸ್​​ಎಸ್​ ರಾಜಮೌಳಿ ಪ್ರತ್ರಿಕಾಗೋಷ್ಠಿ ನಡೆಸಿ ಚಿತ್ರದ ಕುರಿತು ಹೊಸ ವಿಚಾರಗಳನ್ನು ಹಂಚಿಕೊಂಡರು.

https://twitter.com/RRRMovie/status/1106080356137000961

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚಿತ್ರದ ಸ್ಟೋರಿ ಲೈನ್ ಬಗ್ಗೆ ಹೇಳಿದರು. ಇದು ಅಲ್ಲರು ಸೀತಾರಾಮರಾಜು ಹಾಗೂ ಕೋಮರಾಮ್ ಭೀಮ ಸ್ವಾತಂತ್ರ್ಯ ಹೋರಾಟಗಾರ ಕುರಿತಾದ ಚಿತ್ರ ಎಂದರು. ಇದೇ ವೇಳೆ ಆರ್​ಆರ್​ಆರ್​ ಎಲ್ಲ ಭಾಷೆಗಳಿಗೂ ಕಾಮನ್​ ಟೈಟಲ್ ಆಗಿರುತ್ತೆ. ಆದರೆ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಟೈಟಲ್ ಬೇರೆ ಬೇರೆಯಾಗಿರುತ್ತದೆ ಎಂದರು.

ಚಿತ್ರದ ನಂತರ ಬಗ್ಗೆ ಮಾತನಾಡಿದ ರಾಜಮೌಳಿ, ಬಾಲಿವುಡ್ ನಟ ಅಜಯ್​ದೇವಗನ್ ಮುಖ್ಯ ಪಾತ್ರ ನಿಭಾಯಿಸುತ್ತಿದ್ದಾರೆ. ರಾಮ್ ಚರಣ್​ಗೆ ನಾಯಕಿಯಾಗಿ ಬಾಲಿವುಡ್ ನಟಿ ಆಲಿಯಾ ಭಟ್ ಹಾಗೂ ಜ್ಯೂನಿಯರ್​ ಎನ್​ಟಿಆರ್​ಗೆ ಜತೆಯಾಗಿ ನಟಿ ಡೈಸಿ ಎಡ್ಗಾರ್​ ಜೊನ್ಸ್ ಅಭಿನಯಿಸಲಿದ್ದಾರೆ ಎಂದರು. ​

ಇನ್ನು10 ಭಾಷೆಗಳಲ್ಲಿ ಆರ್​ಆರ್​ಆರ್ ಚಿತ್ರ 350 ರಿಂದ 400 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಚಿತ್ರ ರೆಡಿಯಾಗಲಿದೆ . 2020 ಜುಲೈ ತಿಂಗಳಿನಲ್ಲಿ ಈ ಚಿತ್ರ ತೆರೆಗೆ ಬರಲಿದೆ ಎಂದು ಚಿತ್ರತಂಡ ಹೇಳಿತು.

 

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions