-->

‘ಕಿರಿಕ್’ ಡೈರೆಕ್ಟರ್ ರಿಷಬ್ ಶೆಟ್ಟಿಗೆ ‘ಡಬಲ್’ ಸಂಭ್ರಮ


Sunday, March 17th, 2019 6:48 pm

ಸಿನಿಮಾ ಡೆಸ್ಕ್ : ಸ್ಯಾಂಡಲ್ ವುಡ್ ಕಂಡಂತಹ ಕ್ರಿಯೇಟಿವ್ ಡೈರೈಕ್ಟರ್ ರಿಷಬ್ ಶೆಟ್ಟಿ ಅವರು ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಹೊಸ ಸಂಚಲನ ಸೃಷ್ಟಿಸಿದರು.  ಸದ್ಯ ರಿಷಬ್ ಶೆಟ್ಟಿ ತಂದೆಯಾಗುವ ಸಂತಸದಲ್ಲಿದ್ದಾರೆ, ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಗರ್ಭಿಣಿಯಾಗಿದ್ದು. ಅವರ ಸೀಮಂತ ಕಾರ್ಯಕ್ರಮ ಶುಕ್ರವಾರ ಅದ್ದೂರಿಯಾಗಿ ನಡೆದಿದೆ.

ಸೀಮಂತ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್    ನಟ ನಟಿಯರು. ಕಲಾವಿದರುಗಳು ಆಗಮಿಸಿ ಶುಭ ಹಾರೈಸಿದ್ದಾರೆ.  ಇನ್ನೂ, ಬೆಲ್ ಬಾಟಂ ಸಿನಿಮಾದ ನಾಯಕಿ ಹರಿಪ್ರಿಯಾ ಕೂಡ ಸೀಮಂತ ಕಾರ್ಯಕ್ರಮದಲ್ಲಿ ಹಾಜರಿದ್ದರು.  ಇನ್ನೂ ಈ ಸಂತಸದ ಸಂಭ್ರಮದ ಕ್ಷಣಗಳನ್ನು ಫೋಟೋ ಮೂಲಕ ಸೆರೆಹಿಡಿದ ಹರಿಪ್ರಿಯಾ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಪ್ರಗತಿ ಅವರ ಸೀಮಂತ ಕಾರ್ಯಕ್ರಮಕ್ಕೆ ರಿಷಬ್ ಅವರ ಸ್ನೇಹಿತ, ನಟ ರಕ್ಷಿತ್ ಶೆಟ್ಟಿ ಕೂಡ ಬಂದಿದ್ದರು. ಸದ್ಯ ಜಯತೀರ್ಥ ನಿರ್ದೇಶನದ, ಹರಿಪ್ರಿಯಾ-ರಿಷಬ್ ಶೆಟ್ಟಿ ಕಾಂಬಿನೇಷನ್ ನ ‘ಬೆಲ್ ಬಾಟಂ’ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions