ಸುಭಾಷಿತ :

Monday, September 23 , 2019 3:54 PM

ಕ್ರೇಜಿಸ್ಟಾರ್ ಮಾಮನ ಮಗಳ ಮದ್ವೆಗೆ ‘ಮಿಡಿಯಾದವರು ಬ್ಯಾನ್’!


Saturday, May 18th, 2019 11:53 am

ಸಿನಿಮಾಡೆಸ್ಕ್ : ತಮ್ಮ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕೆಂದು ನಿರ್ಧರಿಸಿರುವ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಈಗಾಗಲೇ ಕನ್ನಡದ ಟಾಪ್ ನಟ-ನಟಿಯರು, ಕಲಾವಿದರು ಹಾಗೂ ಸ್ನೇಹಿತರಿಗೆ ವಿಶಿಷ್ಟವಾದ ಲಗ್ನ ಪತ್ರಿಕೆ ನೀಡಿ ಮದುವೆಗೆ ಆಹ್ವಾನಿಸಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಯಲ್ಲಿ ಮೇ.28 ಹಾಗೂ 29 ರಂದು ಅದ್ಧೂರಿಯಾಗಿ ಮದುವೆ ನಡೆಯಲಿದೆ. ಈ ಮದುವೆಗೆ ಸ್ಯಾಂಡಲ್ ವುಡ್ ಸೇರಿದಂತೆ ಬಹುಭಾಷೆಯ ಸಿನಿ ನಟರು, ಗಣ್ಯರು ಆಗಮಿಸಲಿದ್ದಾರೆ. ಆದರೆ ಮಾಧ್ಯಮದವರಿಗೆ ಮದುವೆಗೆ ಬರುವುದು ಬೇಡ ಎಂದು ರವಿಚಂದ್ರನ್  ಹೇಳಿದ್ದಾರೆ.

ಮಗಳ ಮದುವೆ ಕುರಿತಂತೆ ಮಾತನಾಡಿರುವ ರವಿಚಂದ್ರನ್, ಮಾಧ್ಯಮದವರು ಮದುವೆಗೆ ಬರುವುದು ಬೇಡ, ನಾನೇ ಶೂಟ್ ಮಾಡಿ ಎಲ್ಲರಿಗೂ ವಿಡಿಯೋ ಕಳುಹಿಸುತ್ತೇನೆ. ಜೊತೆಗೆ ಮದುವೆಗೆ ಬರುವವರು ವಿಡಿಯೋ ಮಾಡದೇ ಕಣ್ಣಲ್ಲಿ ಕಣ್ಣಿಟ್ಟು ಆಶೀರ್ವಾದ ಮಾಡಿದರೆ ಸಾಕು ಎಂದು ಹೇಳಿದ್ದಾರೆ.  ಮಗಳ ಮದುವೆ ಸಂಭ್ರಮದಿಂದ ನಡೆಯಬೇಕು ಎಂಬುದು ನನ್ನ ಆಸೆ, ಪ್ರಚಾರ ಅಲ್ಲ, ಬರುವವರು ಎಲ್ಲರೂ ಆರಾಮಾವಾಗಿ ಬಂದು ಆಶೀರ್ವಾದ ಮಾಡಿ ಹೋಗಬೇಕೆಂಬುದೇ ನನ್ನ ಆಸೆ ಎಂದು ಹೇಳಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions