-->

‘ಕಿಸ್ಸಿಂಗ್ ಸೀನ್’ ರಹಸ್ಯ ಬಿಚ್ಚಿಟ್ಟ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ…..?!


Saturday, July 13th, 2019 9:50 pm

ಸಿನಿಮಾ ಡೆಸ್ಕ್ : ‘ಗೀತಗೋವಿಂದಂ’ ಭರ್ಜರಿ ಗೆಲುವಿನ ನಂತರ ಇದೀಗ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿ ಡಿಯರ್ ಕಾಮ್ರೇಡ್ ಚಿತ್ರದ ಮೂಲಕ ಮತ್ತೆ ಒಂದಾಗಿದ್ದಾರೆ.

ಗೀತಗೋವಿಂದಂ ಸಿನಿಮಾದ ಸಿನಿ ರಸಿಕರ ಮನ ಗೆದ್ದ ವಿಜಯ್ ದೇವರಕೊಂಡ ​-ರಶ್ಮಿಕಾ ಮಂದಣ್ಣಡಿಯರ್ ಕಾಮ್ರೇಡ್‘  ಸಿನಿಮಾದ ಮೂಲಕ ಜೋಡಿ ಮತ್ತೆ ತೆರೆ ಮೇಲೆ ಒಂದಾಗಿದ್ದು, ಚಿತ್ರದ ಟ್ರೇಲರ್ ರಿಲೀಸ್ ಆಗಿ ಗಮನ ಸೆಳೆಯುತ್ತಿದೆ.

ಹಿಂದೆ ಟೀಸರ್ ಬಿಡುಗಡೆಯಾಗಿದ್ದು, ರಶ್ಮಿಕಾ ಕಿಸ್ಸಿಂಗ್ ಸೀನ್ ನಲ್ಲಿ ನಟಿಸಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಈಗ ಮತ್ತೆ ಚಿತ್ರದ ಟ್ರೇಲರ್ ನಲ್ಲಿ ವಿಜಯ್ರಶ್ಮಿಕಾ ಲಿಪ್ ಲಾಕ್ ಸೀನ್ ನಲ್ಲಿ ನಟಿಸಿದ್ದಾರೆ.

ಇನ್ನೂ ಸಿನಿಮಾದಲ್ಲಿ ಹೆಚ್ಚು ಕಿಸ್ಸಿಂಗ್ ಸೀನ್ ಗಳಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ರಶ್ಮಿಕಾ ಮಂದಣ್ಣ “ ಟ್ರೇಲರ್ ನೋಡಿದರೆ ನಿಮಗೆ ಅರ್ಥವಾಗುತ್ತದೆ. ಇದೊಂದು ಬಹಳ ವಿಭಿನ್ನವಾದ ಸಬ್ಜೆಕ್ಟ್ ಇರುವ ಸಿನಿಮಾ. ಚಿತ್ರದಲ್ಲಿ ಎಲ್ಲಾ ಎಮೋಷನ್ಸ್ ಇದೆ.. ಆದರೂ ಕಿಸ್ಸಿಂಗ್ ಸೀನ್ ಬಗ್ಗೆ ಹೆಚ್ಚಾಗಿ ಚರ್ಚೆ ನಡೆಯುತ್ತಿದೆ. ಚಿತ್ರದಲ್ಲಿ ಬರುವ ಭಾವನಾತ್ಮಕ ಅಂಶಗಳಲ್ಲಿ ಇದು ಕೂಡ” ಎಂದಿದ್ದಾರೆ.  ಬೆಂಗಳೂರಿನಲ್ಲಿ ನಡೆದ ‘ಡಿಯರ್ ಕಾಮ್ರೇಡ್‘ ಸಿನಿಮಾಸುದ್ದಿ ಗೋಷ್ಟಿಯಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

ಗೀತಗೋವಿಂದಂ ಚಿತ್ರದಲ್ಲಿ ಲಿಪ್ ಲಾಕ್ ಮಾಡಿ ಸುದ್ದಿಯಾಗಿದ್ದ ಜೋಡಿ ಚಿತ್ರದಲ್ಲಿ ಮತ್ತೆ ಲಿಪ್ಲಾಕ್ ಮಾಡಿದ್ದಾರೆ. ಚಿತ್ರವನ್ನು ಭರತ್ಕಮ್ಮ ಕಥೆ ಬರೆದು ನಿರ್ದೇಶಿಸಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ಹಾಗೂ ಬಿಗ್ಬೆನ್ ಸಿನಿಮಾಸ್ಡಿಯರ್ ಕಾಮ್ರೇಡ್ಚಿತ್ರವನ್ನು ಜಂಟಿಯಾಗಿ ನಿರ್ಮಿಸಿ ಮಾಡಿದೆಚಿತ್ರದಲ್ಲಿ ವಿಜಯ್ ಹಾಗೂ ರಶ್ಮಿಕಾ ಕ್ಯೂಟ್ ಲವ್ ಸ್ಟೋರಿ ಇರಲಿದ್ದು, ಸಿನಿಮಾ ಬಹಳ ನಿರೀಕ್ಷೆ ಹುಟ್ಟು ಹಾಕಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions