ಸುಭಾಷಿತ :

Monday, September 23 , 2019 3:52 PM

‘ಪಾಕ್’ ಸೋತಿದ್ದಕ್ಕೆ ‘ಕಣ್ಣೀರಿಟ್ಟ’ ಅಭಿಮಾನಿಯನ್ನು ಸಂತೈಸಿದ ರಣವೀರ್ : ವಿಡಿಯೋ ವೈರಲ್


Tuesday, June 18th, 2019 8:48 pm

ಮ್ಯಾಂಚೆಸ್ಟರ್ : ನಿನ್ನೆ ನಡೆದ ಭಾರತಪಾಕಿಸ್ತಾನ ನಡುವಣ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಟೀಂ ಇಂಡಿಯಾ 89 ರನ್ ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಭಾರತೀಯರು ಟೀಂ ಇಂಡಿಯಾ ಗೆಲುವನ್ನು ಸಂಭ್ರಮಿಸುತ್ತಿದ್ದರೆ, ಪಾಕಿಸ್ತಾನಿಯರು ಕಣ್ಣೀರಿಡುತ್ತಿದ್ದಾರೆ.

ಇನ್ನೂ ಮ್ಯಾಚ್ ಸೋತಿದ್ದಕ್ಕೆ ಪಾಕ್ ಅಭಿಮಾನಿಯೊಬ್ಬರು ಕಣ್ಣೀರಿಟ್ಟಿದ್ದು,  ಅದನ್ನು ನೋಡಿದ ಬಾಲಿವುಡ್  ನಟ ರಣವೀರ್ ಸಿಂಗ್ ಆತನನ್ನು ಸಮಾಧಾನಗೊಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ತೀವ್ರ ನಿರಾಸೆಗೆ ಒಳಗಾಗಿದ್ದ ಪಾಕ್ ಅಭಿಮಾನಿಯನ್ನು ಬರಸೆಳೆದು ಸಾಂತ್ವನಗೊಳಿಸಿದ್ದಾರೆ, ರಣವೀರ್ ಆ ಸಮಯದಲ್ಲಿ ತೆಗೆದಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಆ ವ್ಯಕ್ತಿಯನ್ನು ಹತ್ತಿರಕ್ಕೆ ಕರೆದುಕೊಂಡು ಸುಮ್ಮನಿರು ಸುಮ್ಮನಿರು ಇನ್ನೊಂದು ಅವಕಾಶ ಇದೆ, ಅಳಬೇಡ ಅಳಬೇಡ ಪಾಕ್ ತಂಡ ಚೆನ್ನಾಗಿ ಆಡುತ್ತಿದೆ.  ಕ್ರಿಕೆಟಿಗರು ಪ್ರಾಮಾಣಿಕವಾಗಿ ಇದ್ದಾರೆ, ಮತ್ತೆ ಫಾಂಗೆ ಬರುತ್ತಾರೆ ಎಂದು ಸಂತೈಸಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Health
Sandalwood
Food
Beauty Tips
Astrology
Cricket Score
Poll Questions