ಇಂದು `ರಾಂಧವ’ ಸಿನಿಮಾದ ಟೈಟಲ್ ಟ್ರ್ಯಾಕ್ ರಿಲೀಸ್ : ಕನ್ನಡದ ಪ್ರಶ್ನೆಗೆ ಉತ್ತರಿಸಿದವರಿಗೆ ‘ಕಾದಿದೆ ಭರ್ಜರಿ ಗಿಫ್ಟ್’!


Monday, June 17th, 2019 9:15 am

ಸಿನಿಮಾಡೆಸ್ಕ್ : ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಭುವನ್ ಪೊನ್ನಣ್ಣ ನಟಿಸುತ್ತಿರುವ ಬಹುನಿರೀಕ್ಷಿತ ಚಿತ್ರ ರಾಂಧವ ಚಿತ್ರದ ಟೈಟಲ್ ಟ್ರ್ಯಾಕ್ ಇಂದು ರಿಲೀಸ್ ಆಗಲಿದೆ.

ಸುನೀಲ್ ಆಚಾರ್ಯ ಚೊಚ್ಚಲ ನಿರ್ದೇಶನದ ಈ ಚಿತ್ರ ಈಗಾಗಲೇ ಟ್ರೈಲರ್ ಗಳ ಮೂಲಕ ಪ್ರೇಕ್ಷರನ್ನು ಸೆಳೆದುಕೊಂಡಿದೆ. ಇನ್ನೇನು ಬಿಡುಗಡೆಯ ಹೊಸ್ತಿಲಲ್ಲಿರುವ ಈ ಚಿತ್ರದ ಟೈಟಲ್ ಟ್ರ್ಯಾಕ್ ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ಮೂಲಕ ರಿಲೀಸ್ ಆಗಲಿದೆ.

ಕರ್ನಾಟಕದಲ್ಲೇ ಮೊದಲ ಬಾರಿಗೆ ರಿಲೀಸ್ ಗೂ ಮುನ್ನ ವೇ ಟ್ವೀಟರ್ ನಲ್ಲಿ ಟ್ರೆಂಡ್ ಆಗಿರುವ ರಾಂಧವ ಸಿನಿಮಾದ ಮಾಸ್ ಸಾಂಗ್ ` ಅಟಿಟ್ಯೂಡಿಗೆ ಐಕಾನೂ ಇವನು, ಸೈಲೆಂಟ್ ಆಗಿ ದೂರ ಇರಿ’ ಎನ್ನುವ ಹಾಡು ಆನಂದ್ ಯೂ ಟ್ಯೂಬ್ ನಲ್ಲಿ ಬಿಡುಗಡೆ ಆಗಲಿದೆ. ಈ ಹಾಡು ನೋಡಿದವರಿಗೆ ಕನ್ನಡದ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಿ 100 ಬೆಳ್ಳಿ ಹಾಗೂ 300 ರಾಂಧವ ಟೀ ಶರ್ಟ್ ಗಳನ್ನು ಇಂದು ಕೊಡಲು ಚಿತ್ರ ತಂಡ ನಿರ್ಧರಿಸಿದೆ.  ಚಿತ್ರದಲ್ಲಿ ಭುವನ್ ಮೂರು ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭುವನ್ ಗೆ ನಾಯಕಿಯಾಗಿ ಅಪೂರ್ವ ಶ್ರೀನಿವಾಸ್ ನಟಿಸಿದ್ದಾರೆ, ಈ ಸಿನಿಮಾಗೆ ಸುನೀಲ್ ಆಚಾರ್ಯ ಆ್ಯಕ್ಷನ್ ಕಟ್ ಹೇಳಿದ್ದು, ಸನತ್ ಕುಮಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions