ಸುಭಾಷಿತ :

Friday, November 22 , 2019 6:47 AM

‘ರೊಮ್ಯಾಂಟಿಕ್’ ಚಿತ್ರದಲ್ಲಿ ನಟಿ ‘ರಮ್ಯಾಕೃಷ್ಣ’


Friday, October 18th, 2019 7:17 pm

ಸಿನಿಮಾ ಡೆಸ್ಕ್ : ಟಾಲಿವುಡ್ ನಲ್ಲಿ ಇತ್ತೀಚೆಗೆ ಸೆಟ್ಟೇರಿದ ರೊಮ್ಯಾಂಟಿಕ್ ಸಿನಿಮಾ ತಂಡಕ್ಕೆ ನಟಿ ರಮ್ಯಾಕೃಷ್ಣ ಸೇರಿಕೊಂಡಿದ್ದಾರೆ. ಬಾಹುಬಲಿ ಸಿನಿಮಾದ ಮೂಲಕ ಮತ್ತಷ್ಟು ಜನಪ್ರಿಯವಾದ ನಟಿ ರಮ್ಯಾಕೃಷ್ಣಗೆ ಆಫರ್ ಮೇಲೆ ಆಫರ್ ಬರುತ್ತಿದ್ದು, ಈಗ ರೊಮ್ಯಾಂಟಿಕ್ ಚಿತ್ರತಂಡ ಸೇರಿಕೊಂಡಿದ್ದಾರೆ.

ತೆಲುಗಿನ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಅವರ ಪುತ್ರ ಆಕಾಶ್ ಪೂರಿ ಸದ್ಯ ರೋಮ್ಯಾಂಟಿಕ್ ಚಿತ್ರದಲ್ಲಿ ನಟಿಸುತ್ತಿದ್ದು, ಸದ್ಯ ರಿಲೀಸ್ ಆಗಿರುವ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹವಾ ಎಬ್ಬಿಸುತ್ತಿದೆ.ಈ ಪೋಸ್ಟರ್ ನಲ್ಲಿ ಆಕಾಶ್ ಅವರು ಟಾಪ್ ಲೆಸ್ ಆಗಿರುವ ನಟಿಯನ್ನು ತಬ್ಬಿಕೊಂಡಿದ್ದಾರೆ.

ಈ ಸಿನಿಮಾದಲ್ಲಿ ನಟ ಆಕಾಶ್ ಪೂರಿಗೆ ನಟಿ ಕೆತಿಕಾ ಶರ್ಮಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಪೂರಿ ಜಗನ್ನಾಥ್ ಹಾಗೂ ಚಾರ್ಮಿ ಕೌರ್ ನಿರ್ಮಿಸುತ್ತಿರುವ  ಈ ಚಿತ್ರಕ್ಕೆ ಅನಿಲ್ ಪಡುರಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ನಟಿ ರಮ್ಯಾಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.  

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions