ಸುಭಾಷಿತ :

Saturday, October 19 , 2019 4:36 PM

ಪರಮೇಶ್ವರ್ `PA ರಮೇಶ್’ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!


Sunday, October 13th, 2019 8:49 am

ಬೆಂಗಳೂರು : ಮಾಜಿ ಡಿಸಿಎಂ ಪರಮೇಶ್ವರ್ ಪಿಎ ರಮೇಶ್ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಐಟಿ ಅಧಿಕಾರಿಗಳು ರಮೇಶ್ ಮನೆ ಮೇಲೆ ದಾಳಿ ನಡೆಸಿಲ್ಲ, ಯಾವುದೇ ಹೇಳಿಕೆಯನ್ನು ಪಡೆದಿಲ್ಲ ಎಂದು ಸ್ಪಷ್ಟಪಡಸಿದ್ದರು. ಆದರೆ, ಇದೀಗ ಐಟಿ ಅಧಿಕಾರಿಗಳು ಉಲ್ಲಾಳದಲ್ಲಿರುವ ರಮೇಶ್ ಮನೆಗೆ ಹೋಗಿ ಬಂದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಐಟಿ ದಾಳಿ ಹಿನ್ನೆಲೆಯಲ್ಲಿ ರಮೇಶ್ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಐಟಿ ಅಧಿಕಾರಿಗಳು, ನಾವು ರಮೇಶ್ ಮನೆ ಮೇಲೆ ಐಟಿ ದಾಳಿ ನಡೆಸಿಲ್ಲ, ಅಲ್ಲದೇ ಯಾವುದೇ ಹೇಳಿಕೆಯನ್ನು ಪಡೆದಿಲ್ಲ. ದಾಳಿ ವೇಳೆ ಪರಮೇಶ್ವರ್ ನಿವಾಸದಲ್ಲೇ ಇದ್ದ ರಮೇಶ್ ಹೇಳಿಕೆಯನ್ನು ಪಂಚನಾಮೆಯಾಗಿ ಪಡೆಯಲಾಗಿದೆಯಷ್ಟೇ ಎಂದು ಹೇಳಿದ್ದರು.

ಆದರೆ, ಐಟಿ ಅಧಿಕಾರಿಗಳು ಅ. 10 ರಂದು ಮಧ್ಯಾಹ್ನ 1.15 ರ ಸುಮಾರಿಗೆ ರಮೇಶ್ ಅವರ ಉಲ್ಲಾಳದ ನಿವಾಸಕ್ಕೆ ಬಂದು ಕೆಲವೊಂದು ದಾಖಲೆಗಳನ್ನು ಹೊತ್ತೊಯ್ದಿದ್ದಾರೆ. ಅಲ್ಲದೇ ರಮೇಶ್ ಪಂಚಾನಾಮೆ ಮಾಡಿ ಹವಾಲ ಬಗ್ಗೆ ಪ್ರಶ್ನೆ ಮಾಡಿ ಬೆದರಿಸಿದ್ದಾರೆ ಎನ್ನಲಾಗಿದೆ.

ಈ ನಡುವೆ ಐಟಿ ಅಧಿಕಾರಿಗಳ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ರಮೇಶ್ ಸಹೋದರ ಸತೀಶ್ ದೂರು ನೀಡಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions